‘ರಾಯಣ್ಣ ಹುತಾತ್ಮ ಜ್ಯೋತಿ’ಗೆ ಅದ್ಧೂರಿ ಸ್ವಾಗತ - Kittur


 ಸರ್ಕಾರದಿಂದ ‘ಯಾತ್ರೆ’ ನಡೆಸಲು ಆಗ್ರಹ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಖಾನಾಪುರ ತಾಲೂಕಿನ ನಂದಗಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ಸ್ಥಳದಿಂದ ಬೈಲಹೊಂಗಲಕ್ಕೆ ಪ್ರತಿ ವರ್ಷ ಜ. 26 ರಂದು ಕೊಂಡೊಯ್ಯುವ ರಾಯಣ್ಣ ಜ್ಯೋತಿ ಯಾತ್ರೆಯನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಬೇಕು ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ   ಸ್ವಾಮೀಜಿ ಆಗ್ರಹಿಸಿದರು.

ಇಲ್ಲಿಯ  ಚನ್ನಮ್ಮ ವರ್ತುಲಕ್ಕೆ ಮಂಗಳವಾರ ಆಗಮಿಸಿದ ರಾಯಣ್ಣ ಹುತಾತ್ಮ ಜ್ಯೋತಿ ಯಾತ್ರೆಯನ್ನು ವಿಧ್ಯುಕ್ತವಾಗಿ ಸ್ವಾಗತಿಸಿ  ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರÀ ರಚನೆ ಮಾಡಿದೆ. ಇವುಗಳ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷ ಜ. 26 ರಂದು ಈ ಕಾರ್ಯಕ್ರಮ ಏರ್ಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ರಾಯಣ್ಣ ಹಾಗೂ ಆತನ ಜೊತೆ ಹೋರಾಟ  ಮಾಡಿದ ವೀರರ ಜ್ಯೋತಿಯಿದು. ಇದು ರಾಯಣ್ಣನ ಆತ್ಮಜ್ಯೋತಿಯೂ ಆಗಿದೆ. ಇಂತಹ ಅನೇಕ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದಾಗಿ ಸ್ವಾತಂತ್ರ್ಯವನ್ನು ನಾವು ಅನುಭವಿಸುತ್ತಿದ್ದೇವೆ ಎಂದು ಹೇಳಿದರು. 

ನಮ್ಮ ಸ್ವಾಭಿಮಾನವೂ ರಾಯಣ್ಣನ ಆದರ್ಶ ತತ್ವದ ಜೊತೆ ಸಾಗಬೇಕು. ಜ್ಯೋತಿಯಾತ್ರೆಯು ಮನೆ, ಮನದ ಜ್ಯೋತಿಯಾಗಿ ಬೆಳಗಬೇಕು ಎಂದು ಅವರು ಆಶಿಸಿದರು.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮಾತನಾಡಿ,  ಸಂಗೊಳ್ಳಿ ರಾಯಣ್ಣ ಹೆಸರು  ಕೇಳಿದರೆ ಮೈಯಲ್ಲಿ ರೋಮಾಂಚನವಾಗುತ್ತದೆ. ಇಂಥ ಮಹಾನ್ ದೇಶಪ್ರೇಮಿಯ ಹುತಾತ್ಮ ಜ್ಯೋತಿ  ಯಾತ್ರೆಯನ್ನು ಜ. 26 ರಂದು ಸರ್ಕಾರದ ಪರವಾಗಿ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಖ್ಯಾತ ಜಾನಪದ ಕಲಾವಿದ ಸಿ. ಕೆ. ಮೆಕ್ಕೇದ ಮಾತನಾಡಿ, ಸರ್ಕಾರದ ಅನುದಾನವಿಲ್ಲದೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಜ್ಯೋತಿ ಯಾತ್ರೆಯನ್ನು ನಂದಗಡದ ಹುತಾತ್ಮ ಸ್ಥಳದಿಂದ ಕಿತ್ತೂರು ಮಾರ್ಗವಾಗಿ ತಂದು ಬೈಲಹೊಂಗಲ ಚನ್ನಮ್ಮ ಸಮಾಧಿ ಸ್ಥಳದಲ್ಲಿ ಸಮರ್ಪಿಸುವ ಕಾರ್ಯ ಮಾಡುತ್ತ ಬರಲಾಗಿದೆ ಎಂದು ಹೇಳಿದರು. 

ಪಕ್ಷ,  ಜಾತಿ,  ಮತ,  ಪಂಥ, ಪಂಗಡ  ಮೀರಿ ಈ  ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಯುವ ಪೀಳಿಗೆಗೆ ಈ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮತ್ತು ಜೊತೆಗಾರರ ಆದರ್ಶ ಇತಿಹಾಸ ಭವಿಷ್ಯದ ಪೀಳಿಗೆಗೆ ಪರಿಚಯವಾಗಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದು ವಿಶ್ಲೇಷಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ  ಅಧ್ಯಕ್ಷ ಮಹಾಂತೇಶ ಕರಬಸನ್ನವರ,  ನಿಂಗನಗೌಡ ದೊಡ್ಡಗೌಡರ ಮಾತನಾಡಿದರು.

ಆರ್‍ಐ ವಿ. ಬಿ. ಬಡಗಾವಿ, ಪಿಎಸ್‍ಐ ದೇವರಾಜ ಉಳ್ಳಾಗಡ್ಡಿ, ಮುಖಂಡರಾದ ಎಸ್. ಆರ್. ಪಾಟೀಲ,  ಕಿರಣ ಪಾಟೀಲ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಸೋಮನಾಥ ಸೊಪ್ಪಿಮಠ, ಬಿ. ಕೆ. ಪಾಟೀಲ, ಪತ್ರಕರ್ತರಾದ ಈಶ್ವರ ಹೋಟಿ, ರವಿ ಹುಲಕುಂದ, ಬಸವರಾಜ ಕಲಾದಗಿ, ಚಂದ್ರಯ್ಯ   ಯರಗಟ್ಟಿಮಠ ಉಪಸ್ಥಿತರಿದ್ದರು. 

ರಾಯಣ್ಣ ಜೊತೆ ಸಿಕ್ಕ 7 ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೆ ಹಾಕಲಾಯಿತು. ಉಳಿದ 6 ಹೋರಾಟಗಾರರಿಗೆ ಕಾಲಾಪಾನಿ ಶಿಕ್ಷೆಗೆ ಗುರಿಪಡಿಸಲಾಯಿತು. ಈ ವೀರಯೋಧರ ರಾಜಿಯಾಗದ ಹೋರಾಟ ಅವರ್ಣನೀಯ

ನಿಂಗನಗೌಡ ದೊಡ್ಡಗೌಡರ, ಬಿಜೆಪಿ ಮುಖಂಡರು

0/Post a Comment/Comments