ವಾರಾಂತ್ಯ ಕರ್ಫ್ಯೂ : ಬೇಕರಿ, ದಾಬಾಗೆ ಇಲ್ಲ ನಿಯಂತ್ರಣ - Click...
ಎನ್ ಎಚ್ ಆರ್ ಪಿ, ಸಿಸಿಬಿ ವತಿಯಿಂದ ಸಾಧಕರಿಗೆ ಸನ್ಮಾನ
ಪ್ರೆಸ್‍ಕ್ಲಬ್ ವಾರ್ತೆ
ಧಾರವಾಡ: ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಮತ್ತು ಪ್ರತೀಕ್ಷಾ ಸೇವಾ ಸಂಸ್ಥೆ ವತಿಯಿಂದ ಶುಕ್ರವಾರ ವಿವಿಧ ಕ್ಷೇತ್ರಗಳಲ್ಲಿಯ ಸಾಧಕರನ್ನು ಆತ್ಮೀಯವಾಗಿ ಸತ್ಕರಿಸಲಾಯಿತು.
ಸಸಿಗೆ ನೀರು ಹಾಕಿ ಈ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ರಘುವೀರ್ ಸಿದ್ದಿ ಮಾತನಾಡಿ, ಧಾರವಾಡ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾಧಕರ ಆಯ್ಕೆ ನಡೆಸಲಾಗಿದೆ ಎಂದರು.
ಮಾನವ ಹಕ್ಕು ದಿನಾಚರಣೆಯಂದು ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿಯ ಸಾಧನೆ ಮಾಡಿದವರನ್ನು ಆಯ್ಕೆ ಮಾಡಿ ಸತ್ಕರಿಸುವ ಕಾರ್ಯ ಮಾಡಲಾಗುತ್ತಿದೆ. ಕೃಷಿ, ಸಮಾಜಸೇವೆ ಹಾಗೂ ಕಲಾಕ್ಷೇತ್ರಗಳಲ್ಲಿಯ ಸಾಧಕರನ್ನು ಈ ಬಾರಿ ಆಯ್ಕೆ ಮಾಡಿ ಸನ್ಮಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಸಂಸ್ಥೆಯು ರಾಜ್ಯದಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಮಾನವ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿವಿಧ ಕ್ಷೇತ್ರಗಳ ಸಾಧಕರ ಸಾಧನೆ ಉದಯೋನ್ಮುಖ ಪ್ರತಿಭೆಗಳಿಗೆ ಹಾಗೂ ಯುವಕರಿಗೆ ಸ್ಪೂರ್ತಿದಾಯಕ ಮತ್ತು ಮಾರ್ಗದರ್ಶಕವಾಗಲಿ ಎಂಬ ಆಶಯ ನಮ್ಮದಾಗಿದೆ ಎಂದರು.
ಕೃಷಿ ಕ್ಷೇತ್ರದಲ್ಲಿ ಪಿ.ಯುಗಂಧರ್ ನಾಯ್ಡು, ಚಂದ್ರಶೇಖರ, ಭಾರ್ಗವ ನೆಕ್ಕಂಟಿ ಮತ್ತು ಶಿವಶಂಕರ, ಸಮಾಜ ಸೇವೆಗೆ ಬಸಂತಕುಮಾರ ಅನಂತಪುರ ಹಾಗೂ ಕಲಾ ಕ್ಷೇತ್ರದಲ್ಲಿ ಅಭಿಷೇಕ್ ದೇವ್ ಅವರನ್ನು ಈ ಬಾರಿ ಗುರುತಿಸಿ ಗೌರವಿಸಲಾಗಿದೆ ಎಂದು ವಿವರಿಸಿದರು.
ಪರಶುರಾಮ ಭಜಂತ್ರಿ, ಬಸವರಾಜ್ ಕಬಡ್ಡಿ ಮತ್ತು ಕಲಾವಿದ ವಸಂತಕುಮಾರ ಕಡತಿ ಹಾಗೂ ಧಾರವಾಡದ ಕಲಾವಿದರು ಉಪಸ್ಥಿತರಿದ್ದರು.
Post a Comment