ವಾರಾಂತ್ಯ ಕರ್ಫ್ಯೂ : ಬೇಕರಿ, ದಾಬಾಗೆ ಇಲ್ಲ ನಿಯಂತ್ರಣ - click...
12 ವಿದ್ಯಾರ್ಥಿನಿಯರಿಗೆ ಸೋಂಕು ದೃಢ: ಶಾಲೆ ಸೀಲ್‍ಡೌನ್
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸ್ಥಳೀಯ ಪ್ರತಿಷ್ಠಿತ ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ವಸತಿ ಸೈನಿಕ (ಕೆಆರ್‍ಸಿಆರ್‍ಎಸ್) ಶಾಲೆಯ 12 ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ಶನಿವಾರ ದೃಢಪಟ್ಟಿದ್ದು, ಶಾಲೆ ಸೀಲ್ ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ತಿಳಿಸಿದ್ದಾರೆ.
760 ವಿದ್ಯಾರ್ಥಿನಿಯರು ಶಾಲೆಯಲ್ಲಿ ಓದುತ್ತಿದ್ದಾರೆ. 600 ವಿದ್ಯಾರ್ಥಿನಿಯರು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಈಗಾಗಲೇ ಇಲ್ಲಿಗೆ ಬಂದಿದ್ದಾರೆ. ಬೇರೆ ಕಡೆಗಳಿಂದ ಬಂದವರಿಂದ ಸೋಂಕು ಹರಡಿರುವ ಸಾಧ್ಯತೆ ಇರಬಹುದು ಎಂದು ಅವರು ಹೇಳಿದರು.
104 ವಿದ್ಯಾರ್ಥಿನಿಯರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದರಿಂದ ಅವರನ್ನು ರಾಪಿಡ್ ಟೆಸ್ಟ್‍ಗೆ ಒಳಪಡಿಸಲಾಯಿತು. ಅವರಲ್ಲಿ 12 ವಿದ್ಯಾರ್ಥಿನಿಯರಲಿ ್ಲ ಸೋಂಕು ಇರುವುದು ಕಂಡುಬಂದಿದೆ ಎಂದು ಅವರು ಮಾಹಿತಿ ನೀಡಿದರು.
104 ವಿದ್ಯಾರ್ಥಿನಿಯರನ್ನು ಐಸೋಲೇಶನ್ ಮಾಡಲಾಗಿದೆ. ಸೀಲ್‍ಡೌನ್ ಮಾಡಿದ್ದರಿಂದ ಒಳ ಮತ್ತು ಹೊರಗಿನ ಪ್ರವೇಶ ನಿಬರ್ಂಧಿಸಲಾಗಿದೆ. ಲಕ್ಷಣಗಳಿರುವ ವಿದ್ಯಾರ್ಥಿನಿಯರ ಗಂಟಲು ದ್ರವವನ್ನು ಬೆಳಗಾವಿಗೆ ಆರ್ ಟಿಪಿಸಿಆರ್ ತಪಾಸಣೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಅವರು ಹೇಳಿದರು.
ಆರನೇ ತರಗತಿಯಿಂದ ಪಿಯುಸಿ ದ್ವಿತೀಯ ವರ್ಷದ ವರೆಗೆ ವಿದ್ಯಾರ್ಥಿನಿಯರು ಇಲ್ಲಿ ಓದುತ್ತಿದ್ದಾರೆ. ಆದರೆ, ಆರು ಮತ್ತು ಹತ್ತನೇ ವರ್ಗದ ವಿದ್ಯಾರ್ಥಿನಿಯರು ಬಂದಿಲ್ಲ. ಶಾಲೆ ಸೀಲ್ ಡೌನ್ ಮಾಡಿದ್ದರಿಂದ ಅವರಿಗೂ ಬರದಂತೆ ಶಾಲಾ ಸಿಬ್ಬಂದಿಯವರು ಕೋರಿದ್ದಾರೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಆರೋಗ್ಯಾಧಿಕಾರಿ ಎಸ್. ವಿ. ಮುನ್ಯಾಳ, ತಾಲ್ಲೂಕು ವೈದ್ಯಾಧಿಕಾರಿ ಎಸ್. ಎಸ್. ಸಿದ್ದಣ್ಣವರ, ಸಮೀಪದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಆಗಮಿಸಿದ್ದರು.
Post a Comment