ರೂ. 1 ಲಕ್ಷ ಧರ್ಮಸ್ಥಳ ಸಂಸ್ಥೆಯಿಂದ ದೇಣಿಗೆ - Kittur


 ರೂ. 1 ಲಕ್ಷ ಧರ್ಮಸ್ಥಳ ಸಂಸ್ಥೆಯಿಂದ ದೇಣಿಗೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲೂಕಿನ ತಿಗಡೊಳ್ಳಿ ಗ್ರಾಮದ ನಡುವಿನ ಓಣಿಯಲ್ಲಿ ನಿರ್ಮಿಸುತ್ತಿರುವ ನೂತನ ಹನುಮಾನ ದೇವಾಲಯ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 1 ಲಕ್ಷ ದೇಣಿಗೆ ನೀಡಲಾಗಿದೆ.

ಚೆಕ್ ಹಸ್ತಾಂತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಪ್ರದೀಪ ಜಿ ಮಾತನಾಡಿ, ಗುಡಿ ನಿರ್ಮಾಣಕ್ಕೆ ಕಾಣಿಕೆ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಸ್ಥಳದಲ್ಲಿ ನಿಂತು ಕೆಲಸ ಮಾಡುವವರ ಸಂಖ್ಯೆಯೂ ಬೆಳೆಯಬೇಕಿದೆ ಎಂದು ಬಯಸಿದರು. 

ಜನಸಾಮಾನ್ಯರು ಸಾಲ ಪಡೆಯಬೇಕಾದರೆ ಬ್ಯಾಂಕಿಗೆ ತಿರುಗಾಡಿ ಕಾಗದಪತ್ರ ಹೊಂದಿಸುವಲ್ಲಿ ಸುಸ್ತಾಗುತ್ತಿದ್ದರು. ಆದರೆ, ಧರ್ಮಸ್ಥಳ ಸಂಸ್ಥೆಯಲ್ಲಿ ಜನಸಾಮ್ಯಾರಿಗೆ ಸುಲಭ ರೀತಿ ಸಾಲ ಪಡೆಯುವ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದರು.

ಸಂಸ್ಥೆಯು ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರತಿ ಗ್ರಾಮಕ್ಕೂ ಸಿಎಸ್‍ಸಿ ಕೇಂದ್ರ ತೆರೆದಿರುವುದು ಮಹತ್ವದ್ದಾಗಿದೆ. ಎಲ್ಲರೂ ಅದರÀ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಕಳಸಣ್ಣವರ, ಗುತ್ತಿಗೆದಾರ ಚನ್ನಬಸಪ್ಪ ಮಲಶೆಟ್ಟಿ ಮಾತನಾಡಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸವಿತಾ ಗೋದಳ್ಳಿ, ಸದಸ್ಯರಾದ ಗೋಪಾಲ ಹುಕ್ಕೇರಿ, ಜಗದೀಶ ಗೋದಳ್ಳಿ, ಗುಂಡಪ್ಪ ಕ್ಯಾತನವರ, ಗುರುಪಾದಪ್ಪ ಉಪ್ಪಿನ, ಬಾಬು ಜಾಯ್ಕನವರ, ಬಾಳಪ್ಪ ಬಡಸದ, ಸೇವಾ ಪ್ರತಿನಿಧಿ ನಾಗರತ್ನಾ ಬಡಿಗೇರ ಇದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೆಲ್ವೀಚಾರಕಿ ನಾಗರತ್ನ ಕೆ ನಿರೂಪಿಸಿದರು.