ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ ಬಲ ಪ್ರದರ್ಶನ - Kittur

ಪಟ್ಟಣ ಪಂಚಾಯ್ತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ ಬಲ ಪ್ರದರ್ಶನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಎತ್ತರಕ್ಕೆ ಹಾರಾಡಿದ ಭಾರತೀಯ ಜನತಾ ಪಕ್ಷದ ಧ್ವಜಗಳು, ಮೊಳಗಿದ ಪರಿವರ್ತನೆಯ ಗೀತೆ, ಬಿಜೆಪಿಗೆ ಜೈವಾಗಲಿ ಎಂಬ ಮುಗಿಲು ಮುಟ್ಟುವ ನೂರಾರು ಕಾರ್ಯಕರ್ತರ ಘೋಷಣೆ ಮಧ್ಯೆ ಇಲ್ಲಿಯ ರಾಣಿ ಚನ್ನಮ್ಮ ವರ್ತುಲದಿಂದ ಭವ್ಯ ಮೆರವಣಿಗೆ ಮೂಲಕ ಪಟ್ಟಣ ಪಂಚಾಯ್ತಿಗೆ ಆಗಮಿಸಿದ ಬಿಜೆಪಿ ಅಭ್ಯರ್ಥಿಗಳು ಎಲ್ಲ 18 ವಾರ್ಡುಗಳಿಗೆ ತಮ್ಮ ಉಮೇದುವಾರಿಕೆ ಪತ್ರಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು.

ಶಾಸಕ ಮಹಾಂತೇಶ ದೊಡ್ಡಗೌಡರ, ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ನೇತೃತ್ವದಲ್ಲಿ ಹೊರಟ ಕಾರ್ಯಕರ್ತರ ಮೆರವಣಿಗೆಯು ಮುಖ್ಯಬೀದಿಯಲ್ಲಿ ಸಂಚರಿಸಿ ಶಕ್ತಿ ಪ್ರದರ್ಶನ ನಡೆಸಿತು.

ಪಟ್ಟಣ ಪಂಚಾಯ್ತಿ ಬಾಗಿಲಿಗೆ ಮೆರವಣಿಗೆ ಆಗಮಿಸಿದ ನಂತರ ಪ್ರತಿಯೊಬ್ಬ ಅಭ್ಯರ್ಥಿಯನ್ನು ಕರೆದು ಪಕ್ಷದ 'ಬಿ ಫಾರ್ಮ್' ವಿತರಿಸಲಾಯಿತು.

ಇದಕ್ಕೂ ಮೊದಲು ಚನ್ನಮ್ಮ ವರ್ತುಲದಲ್ಲಿ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ, ಪಟ್ಟಣದ ಸಮಗ್ರ ಅಭಿವೃದ್ಧಿಗೆ ನಮ್ಮ ಜೊತೆಗೆ ಮತದಾರರು ಕೈಜೋಡಿಸಬೇಕು. ಎಲ್ಲ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈಗಾಗಲೇ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 200 ಕೋಟಿ ಅನುದಾನ  ನೀಡಲು ಬೇಡಿಕೆ ಮಂಡಿಸಿದ್ದೇವೆ. ಇದರಲ್ಲಿ ರೂ. 50 ಕೋಟಿಗೆ ಮಂಜೂರು ದೊರಕಿದೆ. ಈಗಾಗಲೇ ರೂ. 10 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಮುಖಂಡರಾದ ಸಂದೀಪ ದೇಶಪಾಂಡೆ, ಹನುಮಂತ ಕೊಟಬಾಗಿ, ಅಪ್ಪಣ್ಣ ಪಾಗಾದ, ಹನುಮಂತ ಲಂಗೋಟಿ, ಬಸನಗೌಡ ಸಿದ್ರಾಮನಿ, ಬಸವರಾಜ ಕೊಳದೂರ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೇಗಡ್ಡಿ, ಎಸ್. ಆರ್. ಪಾಟೀಲ, ನಿಂಗನಗೌಡ ಪಾಟೀಲ, ಬಸವರಾಜ ಮಾತನವರ, ಶಿವಾನಂದ ಹನುಮಸಾಗರ, ಅಪ್ಪಣ್ಣ ಮುಷ್ಟಗಿ ಉಪಸ್ಥಿತರಿದ್ದರು.

 

0/Post a Comment/Comments