ರಾಯಣ್ಣ ಪ್ರತಿಮೆ ವಿರೂಪ : ಯುವ ಸಂಘಟನೆ ಖಂಡನೆ - Kittur

ಪಟ್ಟಣ ಪಂಚಾಯ್ತಿ ಚುನಾವಣೆ: ಸಿದ್ಧವಾಯ್ತು ಕಣ - Click...

ರಾಯಣ್ಣ ಯುವ ಸಂಘಟನೆಯಿಂದ ಸರ್ಕಾರಕ್ಕೆ ಆಗ್ರಹ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬೆಳಗಾವಿಯ ಆನಿಗೋಳದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಗೊಳಿಸಿರುವ ಘಟನೆಯನ್ನು ಇಲ್ಲಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಸದಸ್ಯರು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ  ಕಾನೂನು  ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರಿಗೆ ಶನಿವಾರ ಮನವಿ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ ಮಾತನಾಡಿ, ಸಂಗೊಳ್ಳಿ ರಾಯಣ್ಣ ಮಹಾನ್ ದೇಶಪ್ರೇಮಿಯಾಗಿದ್ದ, ಸ್ವಾತಂತ್ರ್ಯಹೋರಾಟಗಾರನಾಗಿದ್ದ. ನಾಡಿನ ಸ್ವಾಭಿಮಾನದ ಕನಸು ಕಂಡಿದ್ದ ಆತ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ. ಕೊನೆಗೆ ಪ್ರಾಣವನ್ನೇ ಬಲಿ ಕೊಟ್ಟ ಧೀರ ಆತ. 

ಇಂತಹ ಹೋರಾಟಗಾರನಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ ತಕ್ಕ ಶಿಕ್ಷೆ ಕೊಡಿಸಬೇಕು ಎಂದೂ ಅವರು ಸರ್ಕಾರವನ್ನು ಆಗ್ರಹಿಸಿದರು.

ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಗಿ, ಶಿವಾನಂದ ಕೆರಿಮಠ,  ಮಲ್ಲಯ್ಯ ಅಂಗಡಿ, ಯಲ್ಲಪ್ಪ ವರಗನ್ನವರ ಉಪಸ್ಥಿತರಿದ್ದರು.

 

0/Post a Comment/Comments