ಕಿತ್ತೂರು ಅರಮನೆ ನೀಲನಕ್ಷೆ ಸಿದ್ಧ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬಹು ನಿರೀಕ್ಷೆಯ ಐತಿಹಾಸಿಕ ಕಿತ್ತೂರು ಅರಮನೆ ಮರು ನಿರ್ಮಾಣದ ನೀಲನಕ್ಷೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಸುವರ್ಣ ವಿಧಾನಸೌಧದಲ್ಲಿ ವೀಕ್ಷಿಸಿದರು.
ಇದರಿಂದಾಗಿ ಕಿತ್ತೂರು ಅರಮನೆ ಮಾದರಿ ನಿರ್ಮಾಣ ಮಾಡಲು ಶಾಸಕ ಮಹಾಂತೇಶ ದೊಡ್ಡಗೌಡರ ಮಹತ್ವದ ಹೆಜ್ಜೆ ಇಟ್ಟಂತಾಗಿದ್ದು, ಒಡೆದ ಕೋಟೆಯ ಮಾದರಿ ಕಟ್ಟುವ 'ಕಿತ್ತೂರು ಒಡೆಯ'ನ ಕನಸು ನನಸಾಗಲಿದೆ.
ಇವುಗಳ ಜೊತೆಯಲ್ಲೇ ಗಡಾದ ಮರಡಿ ಧ್ವಜಸ್ತಂಭ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ, ಚೌಕೀಮಠದ ರಾಜಗುರುಗಳ ಗದ್ದುಗೆಗಳ ಅಭಿವೃದ್ಧಿ, ಸಭಾಭವನ ಹಾಗೂ ಪ್ರಾಧಿಕಾರ ಕಚೇರಿ ನಿರ್ಮಾಣದ ಕಾಮಗಾರಿ ಚಾಲನೆಗೆ ಮುಖ್ಯಮಂತ್ರಿ ಅವರಿಂದ ಅನುಮೋದನೆ ಸಿಕ್ಕÀಂತಾಗಿದೆ.
ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅಮೃತ ದೇಸಾಯಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡ್ಡಿ ಜೊತೆಯಲ್ಲಿದ್ದರು.
Post a Comment