ಕಿತ್ತೂರಿನ ದಾಬಾ ಬಳಿ ಹೊಡೆದಾಡಿದ ಯುವಕರು - Kittur



 

ಕುಡಿದ ಅಮಲಿನಲ್ಲಿ ಮೂವರ ಗಲಾಟೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕುಡಿದ ಮತ್ತಿನಲ್ಲಿ ಮೂವರು ಗಲಾಟೆ ಮಾಡಿಕೊಂಡ ಘಟನೆ ಶನಿವಾರ ತಡರಾತ್ರಿ ಇಲ್ಲಿಯ ದಾಬಾ ಎದುರು ನಡೆದಿದೆ. ಹೆದ್ದಾರಿ ಬಳಿ ಇರುವ ಈ ದಾಬಾ ಎದುರು ಗಲಾಟೆ ನಡೆದರೂ ಯಾರೂ ಅವರ ಜಗಳ  ಬಿಡಿಸಲು ಸಮೀಪ ಹೋಗದಿರುವ ಸ್ಥಿತಿ  ಅಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ರಾತ್ರಿ  ಸಮಯದಲ್ಲಿ ಅವಧಿ ಮೀರಿಯೂ ದಾಬಾಗಳು ಕಾರ್ಯ ನಿರ್ವಹಿಸುತ್ತಿರುವುದು  ಇಂಥ ಅವಘಡಗಳು ನಡೆಯುತ್ತಿರುವುದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ. ಇಲ್ಲಿಯ ಬಹುತೇಕ ಮಾಲೀಕರಿಗೆ ದಾಬಾ ಯಾವ ಸಮಯಕ್ಕೆ ತೆರೆಯಬೇಕು ಮತ್ತು ಮುಚ್ಚಬೇಕು ಎಂಬ ಸಮಯದ ನಿಗದಿಯೇ ಇಲ್ಲದಂತಾಗಿದೆ. ಕೆಲವರ ದಾಬಾಗಳಂತೂ, ಮಧ್ಯರಾತ್ರಿ 12 ರ ನಂತರವೂ ಕಾರ್ಯ ನಿರ್ವಹಿಸುವ ಬಗ್ಗೆ ಅಕ್ಕ ಪಕ್ಕದವರಿಂದ ಆರೋಪಗಳು ಕೇಳಿ ಬರುತ್ತಿವೆ.

ಈಗಂತೂ ಚುನಾವಣೆ ಸಮಯ. ಮಾತಿಗೆ ಮಾತು ಬೆಳೆಯುವುದು, ಪಕ್ಷದ ಅಥವಾ ವಿರೋಧಿ ಅಭ್ಯರ್ಥಿಗಳ ಬಗ್ಗೆ ಹಗುರವಾಗಿ   ದಾಬಾಗಳಲ್ಲಿ ಮಾತನಾಡುವುದು ಗಲಾಟೆಗಳಿಗೆ ಕಾರಣವಾಗುತ್ತಿವೆ  ಎನ್ನುತ್ತಾರೆ ಸಾರ್ವಜನಿಕರು. 

ಚುನಾವಣೆ ಮುಗಿವವರೆಗಾದರೂ ದಾಬಾಗಳನ್ನು ನಿಗದಿತ ಸಮಯಕ್ಕೆ ಮುಚ್ಚಿಸಬೇಕು   ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

0/Post a Comment/Comments