ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪಿತ್ರಾರ್ಜಿತವಾಗಿ ಉಳುಮೆ ಮಾಡುತ್ತ ಬಂದಿರುವ ನಿಜವಾದ ರೈತರ ಹೆಸರುಗಳನ್ನು ಪಹಣಿ ಪತ್ರಿಕೆಯಲ್ಲಿ ದಾಖಲು ಮಾಡಲು ಮುಖ್ಯಮಂತ್ರಿ ಸಲಹೆ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ಉತ್ತರ ನೀಡಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ಶಾಸಕ ಮಹಾಂತೇಶ ದೊಡ್ಡಗೌಡರ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದ ಸಚಿವರು, ಇನಾಂ ಭೂಮಿ ಉಳುವವರಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಇನ್ನೂ ಒಂದು ವರ್ಷ ಹೆಚ್ಚಿಸಲಾಗಿದೆ ಎಂದರು.
ಪಿತ್ರಾರ್ಜಿತವಾಗಿ ಉಳುಮೆ ಹಕ್ಕು ಹೊಂದಿರುವ ಲಕ್ಷಾಂತರ ರೈತರ ಪಹಣಿ ಪತ್ರಿಕೆಯ ಕಬ್ಜೆದಾರ ಕಾಲಮ್ಮಿನಲ್ಲಿ ಕರ್ನಾಟಕ ಸರ್ಕಾರ, ಮೈಸೂರು ಸರ್ಕಾರ ಹಾಗೂ ಬಿನ್ ಶೇತ್ಕಿ ಸರ್ಕಾರ ಎಂದು ನಮೂದಿಸಲಾಗಿದೆ. ಇದರಿಂದ ನಿಜವಾದ ರೈತರು ವಿವಿಧ ಸರ್ಕಾರದ ಯೋಜನೆಗಳಿಂದ ವಂಚಿತರಾಗುವಂತೆ ಆಗಿದೆ ಎಂದು ಶಾಸಕ ದೊಡ್ಡಗೌಡರ ಅವರು ಸರ್ಕಾರದ ಗಮನ ಸೆಳೆದರು.
Post a Comment