ರಾತ್ರಿ ಕಫ್ರ್ಯೂ ಉಲ್ಲಂಘಿಸಿದರೆ ಕಠಿಣ ಕ್ರಮ - Kittur


ರಾತ್ರಿ ಕಫ್ರ್ಯೂ ಉಲ್ಲಂಘಿಸಿದರೆ ಕಠಿಣ ಕ್ರಮ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕೊರೊನಾ ಮೂರನೇ ಅಲೇ ಒಮಿಕ್ರಾನ್ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 10 ದಿನಗಳ ಕಾಲ ರಾತ್ರಿ ಕಫ್ರ್ಯೂ ಘೋಷಣೆ ಮಾಡಿದ್ದು, ಅದನ್ನು ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಿಎಸ್‍ಐ ದೇವರಾಜ ಉಳ್ಳಾಗಡ್ಡಿ ಎಚ್ಚರಿಸಿದರು.
ಇಲ್ಲಿಯ ಅರಳಿಕಟ್ಟಿ ವೃತ್ತದಲ್ಲಿ ಮಂಗಳವಾರ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಈ ಮಾಹಿತಿ ನೀಡಿದ ಅವರು, ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಡಿ. 28 ರಿಂದ ಜ. 7 ರವರೆಗೆ ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಅಂಗಡಿ, ಮುಂಗಟ್ಟು ತೆರೆಯಬಾರದು. ಸಾರ್ವಜನಿಕರ ಅನಗತ್ಯ ಓಡಾಡ ನಿಷೇಧಿಸಲಾಗಿದೆ. ಹೋಟೆಲ್‍ಗಳಲ್ಲಿ ಶೇ 50 ರಷ್ಟು ಜನರಿಗೆ ಅವಕಾಶವಿದೆ ಎಂದು ಹೇಳಿದರು. 
ಔಷಧü ಮತ್ತು ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದೂ ಅವರು ತಿಳಿಸಿದರು.


0/Post a Comment/Comments