ಹುಲಿಕಟ್ಟಿ : ನಿಧಿ ಆಸೆಗಾಗಿ ದೇವರ ಮೂರ್ತಿ ಅಗೆದ ಕಿಡಿಗೇಡಿಗಳು - Kittur


 ನಿಧಿ ಆಸೆಗಾಗಿ ದೇವರ ಮೂರ್ತಿ ಅಗೆದ ಕಿಡಿಗೇಡಿಗಳು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಹೊನ್ನಿದಿಬ್ಬ ಗ್ರಾಮದಲ್ಲಿರುವ ಪುರಾತನ ರಾಮಲಿಂಗೇಶ್ವರ ದೇವಸ್ಥಾನದಲ್ಲಿಯ ಶಿವಲಿಂಗ ಮೂರ್ತಿಯನ್ನು ನಿಧಿ ಆಸೆಗಾಗಿ ಕಿಡಿಗೇಡಿಗಳು ಶನಿವಾರ ಮಧ್ಯ ರಾತ್ರಿ ಕಿತ್ತು ಹಾಕಿರುವ ಘಟನೆ ಜರುಗಿದೆ.


ದೇವಾಲಯ ಬಳಿ ಇರುವ ಪ್ರದೇಶದ ಸುತ್ತಲೂ ವಾಮಾಚಾರ ಮಾಡಿ ದಿಗ್ಬಂಧನ ಹಾಕಿದ್ದಾರೆ. ಅನಂತರ ಒಳಗೆ ಪ್ರವೇಶಿಸಿ ಮೂರ್ತಿ ಕಿತ್ತು ಹಾಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಬೆಳಗಿನ ಪೂಜಾ ಸಮಯಕ್ಕೆ ಅರ್ಚಕರು ದೇವಾಲಯಕ್ಕೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಅನಂತರ ಅವರು ಗ್ರಾಮಸ್ಥರಿಗೆ ಸುದ್ದಿ ತಲುಪಿಸಿದ್ದಾರೆ. ಐದು ವರ್ಷಗಳ ಹಿಂದೆ ಇದೇ ಮೂರ್ತಿಯನ್ನು ಕಿತ್ತು ಹಾಕಲಾಗಿತ್ತು ಎಂದು ಗ್ರಾಮದ ಜನರು ಮಾಹಿತಿ ನೀಡಿದರು.