ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿ ಪೂಜೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಗದ್ದಿಓಣಿಯ ವಿಠ್ಠಲ ದೇವಸ್ಥಾನದ ಬಳಿ ನಿರ್ಮಿಸಲು ಉದ್ದೇಶಿಸಿರುವ ಉಚಿತ ಶುದ್ಧ ಕುಡಿಯುವ ನೀರಿನ ನೂತನ ಘಟಕದ ನಿರ್ಮಾಣಕ್ಕೆ ಡಿ. 24 ರಂದು ಆಚಾರ್ಯ ವಿಕ್ರಮಾಚಾರ್ಯ ಗಡಿಗಿ ಭೂಮಿ ಪೂಜೆ ನೆರವೇರಿಸಿದರು.
ಗದ್ದಿಓಣಿಯ ಸಾರ್ವಜನಿಕರ ಬೇಡಿಕೆಯ ಮೇರೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದೆ. ಅನೇಕ ವರ್ಷಗಳಿಂದ ನಮಗೆ ಕುಡಿಯಲು ಶುದ್ಧ ನೀರು ದೊರೆಯುತ್ತಿರಲಿಲ್ಲ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದರು. ಹೀಗಾಗಿ ಅವರಿಗೆ ಶುದ್ಧ ನೀರು ಒಗದಿಸುವ ನಿಟ್ಟಿನಲ್ಲಿ ಆರಂಭಿಕ ಕೆಲಸಕ್ಕೆ ಚಾಲನೆ ನೀಡಲಾಯಿತು ಎಂದು ಬಿಜೆಪಿ ಮುಖಂಡ ಹಣಮಂತ ಕೊಟಬಾಗಿ ತಿಳಿಸಿದರು.
ಅಂದಾಜು ರೂ. 4 ಲಕ್ಷ ವೆಚ್ಚದಲ್ಲಿ ನೀರಿನ ಘಟಕ ನಿರ್ಮಾಣವಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಕೋರಿದರು.
ಶಾರದಾ ಮೌನ ಗುರೂಜಿ, ನಾರಾಯಣ ಹವಾಲ್ದಾರ್, ಗುಂಡು ಪತ್ತಾರ, ಸುರೇಶ ನಾಯ್ಕ, ಕಲ್ಲವ್ವ ತೋಟದ, ಗೀತಾ ಕೊಟಬಾಗಿ, ಡಾ. ಸುಧನ್ವ ಕೊಟಬಾಗಿ ಓಣಿ ನಾಗರಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Post a Comment