ಬಿಜೆಪಿ ಅಭ್ಯರ್ಥಿ ಪರ ಹಣಮಂತ ಕೊಟಬಾಗಿ ಪ್ರಚಾರ - Kittur


 ಮತ ನೀಡುವಂತೆ ಹಣಮಂತ ಕೊಟಬಾಗಿ ಮನವಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿ ಚುನಾವಣೆಗೆ 5 ನೇ ವಾರ್ಡಿನಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಾಬು ಶಿರೋಮಣಿ ಪರವಾಗಿ ಪಕ್ಷದ ಮುಖಂಡ ಹಣಮಂತ ಕೊಟಬಾಗಿ ಸೋಮವಾರ ಭರ್ಜರಿ ಪ್ರಚಾರ ಮಾಡಿದರು.

ಪ್ರತಿ ಮನೆ, ಮನೆಗೆ ಅಭ್ಯರ್ಥಿಯೊಂದಿಗೆ ತೆರಳಿ ಮತಪತ್ರ ನೀಡಿ ಬಿಜೆಪಿ ಗೆಲ್ಲಿಸುವಂತೆ ಅವರು ಮತದಾರರಲ್ಲಿ ಮನವಿ ಮಾಡಿದರು.

ಸ್ಪರ್ಧಿಸಿರುವ ಎಲ್ಲ ವಾರ್ಡುಗಳಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಪಟ್ಟಣ ಪಂಚಾಯ್ತಿಯ ಅಧಿಕಾರ ಗದ್ದುಗೆಯನ್ನು ಪಕ್ಷ ಮತ್ತೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಸತಿ ರಹಿತರಿಗೆ ಮನೆ, ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ ಸೇರಿ ಮೂಲ  ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲು ಪಕ್ಷ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ವಿಠ್ಠಲ ಮಠದ, ನಾಗೇಶ ಎಲಿಗಾರ, ಈರಪ್ಪ ಪೂಜೇರ, ಸಮೀರ ಮಠದ, ಮಧುಮತಿ ಪಟ್ಟಣಶೆಟ್ಟಿ, ಸುಜಾತಾ ಕುಲಕರ್ಣಿ, ಪಾರ್ವತಿ ಸರಪಳಿ ಉಪಸ್ಥಿತರಿದ್ದರು.

0/Post a Comment/Comments