ಪಟ್ಟಣ ಪಂಚಾಯ್ತಿ ಚುನಾವಣೆ : ಸತೀಶ ಜಾರಕಿಹೊಳಿ ಪ್ರಚಾರ - Kittur

ಪಟ್ಟಣ ಪಂಚಾಯ್ತಿ ಚುನಾವಣೆ : ಅಭ್ಯರ್ಥಿ ಆಶ್ವಾಸನೆ ಏನು?- ವಿಡಿಯೋ ನೋಡಿ...


‘23ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ'

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಪಟ್ಟಣ ಪಂಚಾಯ್ತಿ ಚುನಾವಣೆಯ ಗೆಲುವು 2023ರಲ್ಲಿ ಆಗಮಿಸುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಕಾಂಗ್ರೆಸ್ ಪಕ್ಷದ  ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಡಿ. 27 ರಂದು ನಡೆಯಲಿರುವ ಚುನಾವಣೆ ಪ್ರಯುಕ್ತ ಬುಧವಾರ ಇಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಹೊಂಡ ನಿರ್ಮಾಣ, ಕೆರೆ ತುಂಬಿಸುವ ಯೋಜನೆ ಸೇರಿ ಅನೇಕ ರೈತ ಮತ್ತು ಜನಹಿತ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ  ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಧರಣಿ ನಡೆಸುತ್ತಿರುವ ಸಂಘಟನೆ ಹಾಗೂ ಸಮಾಜಗಳ ನೋವು ಆಲಿಸಿ ಇಲ್ಲಿಗೆ ಬಂದಿದ್ದೇವೆ. ಅವರ ಸಮಸ್ಯೆ ಪರಿಹರಿಸಲು ಈ ಸರ್ಕಾರದಿಂದ ಆಗುತ್ತಿಲ್ಲ. ಜನಹಿತ ಮತ್ತು ಸಮಾಜ ಹಿತ ಬಯಸದ ಇಂತ ಸರ್ಕಾರ ನಮಗೆ ಬೇಕೆ ಎಂದು ಮತದಾರರನ್ನು ಪ್ರಶ್ನಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಆದರೆ ಜನರ ಕಣ್ಣೀರು ಒರೆಸುವ ಸರ್ಕಾರ ಬರಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಒಂದಾದರೂ ಹೊಸ ಯೋಜನೆ ಜಾರಿಗೆ ತಂದಿದೆಯೇ ಎಂದು ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್, ಡಿಸೇಲ್, ಎಲ್‍ಪಿಜಿ ಸಿಲಿಂಡರ್, ಅಡುಗೆ ಎಣ್ಣೆ ಬೆಲೆ ಏನಾಗ್ತಿದೆ ಎಂದು ಜನರಿಗೆ ಪ್ರಶ್ನೆ ಮಾಡಿದ ಅವರು, ತಮ್ಮ ರೋಷ ಮತ್ತು ಅಸಹನೆಯನ್ನು ಮತಗಳ ಮೂಲಕ ಮತದಾರರು ತೀರಿಸಿಕೊಳ್ಳಬೇಕು ಎಂದು ಕೋರಿದರು.

ಮುಖಂಡ ಬಾಬಾಸಾಹೇಬ ಪಾಟೀಲ ಮಾತನಾಡಿ, ಗುರುವಾರ ಪೇಟೆಯಲ್ಲಿ ಬರುವ 8 ವಾರ್ಡುಗಳಲ್ಲಿ ಕಳೆದ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 6ರಲ್ಲಿ ಗೆದ್ದಿದ್ದೆವು. ಈ ಬಾರಿ ಎಂಟೂ ವಾರ್ಡುಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ವೀಕ್ಷಕ ಬಂಗಾರೇಶ ಹಿರೇಮಠ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖಂಡರಾದ ಶಂಕರ ಹೊಳಿ,  ಸಯ್ಯದ ಮನ್ಸೂರ, ಹಬೀಬ ಶಿಲೇದಾರ, ಅರುಣಕುಮಾರ ಬಿಕ್ಕಣ್ಣವರ, ಸ್ಥಳೀಯ ಮುಖಂಡರು, ಅಭ್ಯರ್ಥಿಗಳು ಇದ್ದರು.

 

0/Post a Comment/Comments