ಕಾಂಗ್ರೆಸ್ ಮುಖಂಡರಿಂದ ಮತಯಾಚನೆ - Kittur


 

 ಮನೆ ಬಾಗಿಲಿಗೆ ತೆರಳಿ ಮುಖಂಡರಿಂದ ಮತಯಾಚನೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಡಿ. 27 ರಂದು  ಚುನಾವಣೆ ನಡೆಯಲಿದ್ದು, ಪ್ರಚಾರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಮುಖಂಡರು ಮತಯಾಚನೆ ಮಾಡುತ್ತಿದ್ದಾರೆ.

2 ಮತ್ತು 7 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಗಳಾದ ಯಲ್ಲಪ್ಪ ಕಡಕೋಳ ಹಾಗೂ ಬಸವರಾಜ ಮಂಗಳಗಟ್ಟಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದರು. ಮುಖಂಡರು ಇವರಿಗೆ ಸಾಥ್ ನೀಡಿದರು.

ಪಟ್ಟಣದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು  ಎಂದು ಕೋರಿದರು.

ಮುಖಂಡರಾದ ಹನೀಫ್ ಸುತಗಟ್ಟಿ, ಪುಂಡಲೀಕ ನೀರಲಕಟ್ಟಿ, ಸಂಜೀವ ಲೋಕಾಪುರ, ವಿರುಪಾಕ್ಷ ಮಾರಿಹಾಳ, ರವಿ ಜಾಲಿಕಟ್ಟಿ, ಮಹ್ಮದಹಯಾತ್ ಸೌದಾಗರ, ಅಮಾನ ಮಾಲ್ದಾರ, ಅಕ್ಬರ ಸಯ್ಯದ, ಶಬ್ಬಿರ ಸೌದಾಗರ, ಅಬ್ದುಲ್ ರೆಹಮಾನ್ ಖಾದ್ರಿ, ಮೌಸೀನ್ ಬೆಳವಡಿ,  ಮೋಫಿಜ್ ಬೆಂಗಳೂರಿ, ಇಶ್ರ್ಯಾದ ಮುಲ್ಲಾ, ರಹಮತವುಲ್ಲಾ ಸೌದಾಗರ, ಫಯಾಜ್ ಸೌದಾಗರ, ಜಬೀವುಲ್ಲಾ ಮಕಾಂದಾರ ಇದ್ದರು.