ಕಿತ್ತೂರು ತಾಲೂಕು : ಯಾವ್ಯಾವ ಪಂಚಾಯ್ತಿಯಲ್ಲಿ ಎಷ್ಟು ಮತದಾನ - Kittur

ಕಿತ್ತೂರು ತಾಲೂಕಿನಲ್ಲಿ ಮತದಾನ ಶೇ 100

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಿತ್ತೂರು ತಾಲೂಕಿನಲ್ಲಿ ಶೇ 100 ರಷ್ಟು ಮತದಾನವಾಗಿದೆ. 17 ಗ್ರಾಮ ಪಂಚಾಯ್ತಿಗಳ ಒಟ್ಟು 233 ಸದಸ್ಯರು ಮತದಾನ ಮಾಡಿದ್ದು, ಇವರಲ್ಲಿ ಮಹಿಳೆಯರು 121 ಮತ್ತು ಪುರುಷರು 112 ಸೇರಿದ್ದಾರೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಮಾಹಿತಿ ನೀಡಿದರು.

ಆರಂಭದಲ್ಲಿ ಮತದಾರ ತಮ್ಮ ಹಕ್ಕು ಚಲಾಯಿಸಲು ಹೆಚ್ಚು ಉತ್ಸಾಹ ತೋರಲಿಲ್ಲ. ಮಧ್ಯಾಹ್ನ ನಂತರ ಚುರುಕು ಪಡೆಯಿತು. ಕಿತ್ತೂರು ತಾಲೂಕಿನ ಆಯಾ ಗ್ರಾಮ ಪಂಚಾಯ್ತಿ ಮತಕೇಂದ್ರದ ಮತದಾನದ ವಿವರ ಹೀಗಿದೆ:

ಅವರಾದಿ-15,  ನಿಚ್ಚಣಕಿ-18, ದೇಗಾಂವ-20, ದಾಸ್ತಿಕೊಪ್ಪ-08, ಕಾದ್ರೊಳ್ಳಿ-15, ಅಂಬಡಗಟ್ಟಿ-21, ಉಗರಕೋಡ-14, ಬೈಲೂರು-13, ಕುಲವಳ್ಳಿ-11, ದೇವರ ಶೀಗಿಹಳ್ಳಿ-14, ಹುಣಸಿಕಟ್ಟಿ-14, ತುರಮರಿ-10, ಕಲಬಾಂವಿ-15, ಹಿರೇನಂದಿಹಳ್ಳಿ-12, ಖೋದಾನಪುರ-15, ತಿಗಡೊಳ್ಳಿ-12, ವೀರಾಪುರ-06.

 

0/Post a Comment/Comments