ಪಟ್ಟಣ ಪಂಚಾಯ್ತಿ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಘೋಷಣೆ - Kittur



ಪಟ್ಟಣ ಪಂಚಾಯ್ತಿ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಘೋಷಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ದ ಪಡಿಸಿರುವ ಪಕ್ಷವು 3 ಮತ್ತು 10 ವಾರ್ಡಿನ ಅಭ್ಯರ್ಥಿಗಳ ಆಯ್ಕೆಯನ್ನು ಕಾಯ್ದಿರಿಸಿದೆ.
ಪಕ್ಷದ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ ಪತ್ರಿಕಾಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದರು. 
ಶಾಸಕ ಮಹಾಂತೇಶ ದೊಡ್ಡಗೌಡರ ಮತ್ತು ಮುಖಂಡರ ಸಮ್ಮುಖದಲ್ಲಿ ಪ್ರತಿ ವಾರ್ಡಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಾಯಿತು. ಎಲ್ಲರ ಅಭಿಪ್ರಾಯ ಕ್ರೋಡಿಕರಿಸಿ ಅಂತಿಮ ಪಟ್ಟಿ ಸಿದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
3 ಮತ್ತು 10 ನೇ ವಾರ್ಡಿನ ಅಭ್ಯರ್ಥಿಗಳ ಹೆಸರುಗಳನ್ನು ಬುಧವಾರ ಮಧ್ಯಾಹ್ನ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಮಾತನಾಡಿ, ಶಾಸಕ ಮಹಾಂತೇಶ ದೊಡ್ಡಗೌಡರ ಜೊತೆ ಸೇರಿ ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಬೇಕೆಂಬ ಅಪೇಕ್ಷೆ ಅನೇಕ ಆಕಾಂಕ್ಷಿ ಅಭ್ಯರ್ಥಿಗಳಲ್ಲಿತ್ತು. ಟಿಕೆಟ್ ಸಿಗದವರೂ ಕೂಡಾ ಪಕ್ಷದ ಜೊತೆಗೆ ಇರುತ್ತಾರೆ. ಅಧಿಕೃತ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ ಹಾಗೂ ನ್ಯಾಯವಾದಿ ವಿಶ್ವನಾಥ ಬಿಕ್ಕಣ್ಣವರ ಮಾತನಾಡಿ ಒಮ್ಮತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳು ಹೆಸರು, ಸ್ಪರ್ಧಿಸುವ ವಾರ್ಡುಗಳು ಹೀಗಿವೆ:
ಮಹಾಂತೇಶ ಕಡೇಮನಿ (1ನೇ ವಾರ್ಡು), ನಾಗೇಶ ಅಸುಂಡಿ (2 ನೇ ವಾರ್ಡು), ಪ್ರಮೋದ ಕಾಜಗಾರ(4 ನೇ ವಾರ್ಡು), ಬಾಬು ಶಿರೋಮಣಿ (5 ನೇ ವಾರ್ಡು), ವಜ್ರಾವತಿ ಭೀಮರೆಡ್ಡಿ (6 ನೇ ವಾರ್ಡು), ಮಂಜುನಾಥ ತೊಟ್ಟಿಲಮನಿ (7 ನೇ ವಾರ್ಡು), ರಾಜು ಕಲ್ಲವಡ್ಡರ (8 ನೇ ವಾರ್ಡು), ನಾಗೇಶ ಸೊಂಟಕ್ಕಿ (9 ನೇ ವಾರ್ಡು), ಅನುರಾಧಾ ಬಡಿಗೇರ (11 ನೇ ವಾರ್ಡು), ಮಂಜುನಾಥ ಮುರಗೋಡ (12 ನೇ ವಾರ್ಡು), ರುಕ್ಮಿಣಿ ಬಡಿಗೇರ (13 ನೇ ವಾರ್ಡು), ಶೋಭಾ ಚವ್ಹಾಣ (14 ನೇ ವಾರ್ಡು), ಕಿರಣ ಪಾಟೀಲ (15 ನೇ ವಾರ್ಡು), ಲಕ್ಷ್ಮಿ ಬಡಿಗೇರ (16 ನೇ ವಾರ್ಡು), ದಾವಲತ್ ಪರಂಡೇಕರ (17 ನೇ ವಾರ್ಡು), ಸಂಗಪ್ಪ ನರಗುಂದ (18 ನೇ ವಾರ್ಡು).
ಮುಖಂಡರಾದ ನಿಜಲಿಂಗಯ್ಯ ಹಿರೇಮಠ, ವಿಶ್ವನಾಥ ಬಿಕ್ಕಣ್ಣವರ, ಅಪ್ಪಣ್ಣ ಪಾಗಾದ, ಉಳವಪ್ಪ ಉಳ್ಳೇಗಡ್ಡಿ, ಹನುಮಂತ ಲಂಗೋಟಿ ಎಸ್. ಆರ್. ಪಾಟೀಲ. ಸುವರ್ಣ ಹಂಜಿ, ಬಸವರಾಜ ಮಾತನವರ, ಶಿವಾನಂದ ಹನುಮಸಾಗರ ಇದ್ದರು.

0/Post a Comment/Comments