ಪಟ್ಟಣ ಪಂಚಾಯ್ತಿ ಚುನಾವಣೆ: ಸಿದ್ಧವಾಯ್ತು ಕಣ - Kittur

ಪಟ್ಟಣ ಪಂಚಾಯ್ತಿ ಚುನಾವಣೆ: ಸಿದ್ಧವಾಯ್ತು ಕಣ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸ್ಥಳೀಯ ಪಟ್ಟಣ ಪಂಚಾಯ್ತಿಯ 18 ಸ್ಥಾನಗಳಿಗೆ ಡಿ. 27 ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಜಿದ್ದಾಜಿದ್ದಿಯ ಅಖಾಡ ಸಿದ್ಧವಾಗಿದೆ. ನಾಮಪತ್ರ ವಾಪಸು ಪಡೆಯುವ ಕೊನೆಯ ದಿನವಾಗಿದ್ದ   ಶನಿವಾರ ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದವರು ಸೇರಿ ಒಟ್ಟು 8 ಜನರು ತಮ್ಮ ನಾಮಪತ್ರಗಳನ್ನು ಹಿಂಪಡೆದರು.

ಬಿಜೆಪಿಯ 18, ಕಾಂಗ್ರೆಸ್ 17, ಜೆಡಿಎಸ್ 1 ಹಾಗೂ ಪಕ್ಷೇತರ 8 ಅಭ್ಯರ್ಥಿಗಳು ಕಣದಲ್ಲಿದ್ದು, ಚುನಾವಣೆ ಆಖಾಡ ರಂಗೇರಿದಂತಾಗಿದೆ.

1ನೇ ವಾರ್ಡಿನಿಂದ ಕಾಂಗ್ರೆಸ್ ತನ್ನ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಪಕ್ಷೇತರ ಅಭ್ಯರ್ಥಿ ಜೈ ಸಿದ್ಧರಾಮ ಮಾರಿಹಾಳ ಅವರಿಗೆ ಬೆಂಬಲ ನೀಡಿದೆ. 

ಬಿಜೆಪಿ ಟಿಕೆಟ್ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಕಿರಣ ವಾಳದ ಅವರಿಗೆ ಕೊನೆಗೂ ಪಕ್ಷ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಹೀಗಾಗಿ 7 ನೇ ವಾರ್ಡಿನಿಂದ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಘಟಾನುಘಟಿ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಇದು ಸಾರ್ವಜನಿಕರ ಹೆಚ್ಚು ಗಮನ ಸೆಳೆದಿದೆ.

ಕಾಂಗ್ರೆಸ್ಸಿನಿಂದ ಕೊನೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾದ ಸುತಗಟ್ಟಿ ಸಹೋದರರು ಈ ಬಾರಿಯೂ ತಮ್ಮ ವಾರ್ಡುಗಳಲ್ಲಿ ತಮ್ಮ ಕುಟುಂಬದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಹಾಗೂ ಸದಸ್ಯರಾಗಿ ಸೇವೆ ಮಾಡಿದ್ದ ಇಬ್ಬರೂ ಸಹೋದರರಿಗೆ ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ   ಇಂಥಹದ್ದೇ ಅನುಭವವಾಗಿತ್ತು.  ಆ ಸಂದರ್ಭದಲ್ಲಿ ಪಕ್ಷೇತರರಾಗಿ ಇಬ್ಬರೂ ಸ್ಪರ್ಧಿಸಿ ಗೆದ್ದು ಬಂದಿದ್ದರು. ಹಿರಿಯ ಸಹೋದರ ಹನೀಫ್ ಸುತಗಟ್ಟಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು.

ಆಯಾ  ವಾರ್ಡುಗಳಿಂದ ಸ್ಪರ್ಧಿಸಿರುವ ವಿವಿಧ ಪಕ್ಷಗಳ ಅಭ್ಯರ್ಥಿಗಳ ವಿವರ ಹೀಗಿದೆ:

ವಾರ್ಡು 1: ಜೈ ಸಿದ್ಧರಾಮ ಮಾರಿಹಾಳ- ಪಕ್ಷೇತರ, ಶಿವಲಿಂಗಪ್ಪ ಕಡೆಮನಿ-  ಬಿಜೆಪಿ

2: ನಾಗರಾಜ ಅಸುಂಡಿ- ಬಿಜೆಪಿ,  ಯಲ್ಲಪ್ಪ ಕಡಕೋಳ- ಕಾಂಗ್ರೆಸ್

3: ತಸ್ಲಿಮಬಾನು ಸುತಗಟ್ಟಿ- ಪಕ್ಷೇತರ, ಶರೀಪಾಬಿ ಬಸಾಪುರ- ಬಿಜೆಪಿ,

ಶಾಹೀನಬಾನು ತಿಗಡೊಳ್ಳಿ - ಕಾಂಗ್ರೆಸ್

4: ಪ್ರಮೋದ ಕಾಜಗಾರ- ಬಿಜೆಪಿ, ಸೂರ್ಯಕಾಂತ ಕಿತ್ತೂರು- ಕಾಂಗ್ರೆಸ್

5: ಬಡಿಗೇರ ಶಂಕರ -ಕಾಂಗ್ರೆಸ್, ಶಿರೋಮಣಿ ಮಲ್ಲೇಶಪ್ಪ- ಬಿಜೆಪಿ

6: ಜಕ್ಕನಗೌಡರ ಶಾರದಾ- ಕಾಂಗ್ರೆಸ್, ಭೀಮರೆಡ್ಡಿ ವಜ್ರಾವತಿ- ಬಿಜೆಪಿ

7: ಕಿರಣ ವಾಳದ- ಪಕ್ಷೇತರ, ಮಂಜುನಾಥ ತೊಟ್ಟಿಲಮನಿ- ಬಿಜೆಪಿ 

ಈರಣ್ಣ ಮಾರಿಹಾಳ- ಕಾಂಗ್ರೆಸ್À, ಪ್ರಕಾಶ ಜಾಂಗಟಿ -ಪಕ್ಷೇತರ

8: ಈರಪ್ಪ ಕಲವಡ್ಡರ- ಕಾಂಗ್ರೆಸ್, ರಾಜು ಕಲವಡ್ಡರ- ಬಿಜೆಪಿ

9: ಮುಗಟಸಾಬ ಜಕಾತಿ- ಪಕ್ಷೇತರ, ನಾಗೇಶ ಸೊಂಟಕ್ಕಿ- ಬಿಜೆಪಿ

ಬಸವರಾಜ ಮಂಗಳಗಟ್ಟಿ -ಕಾಂಗ್ರೆಸ್

10: ಯಾಸೀನ ದಾಸ್ತಿಕೊಪ್ಪ- ಕಾಂಗ್ರೆಸ್, ಸಮರಿನಬಾಬು ಸುತಗಟ್ಟಿ- ಪಕ್ಷೇತರ,

ರಶಿದಾ ಬೇಪಾರಿ- ಬಿಜೆಪಿ

11: ಶೋಭಾ ಕಕ್ಕೇರಿ- ಕಾಂಗ್ರೆಸ್, ಅನುರಾಧಾ ಬಡಿಗೇರ- ಬಿಜೆಪಿ

12: ಪಕ್ಕೀರಪ್ಪ ಗುಂಜಿ- ಪಕ್ಷೇತರ, ಕೃಷ್ಣಾ ಬಾಳೇಕುಂದರಗಿ- ಕಾಂಗ್ರೆಸ್

ಮಂಜುನಾಥ ಮುರಗೋಡ- ಬಿಜೆಪಿ

13: ನದಿಮುಲ್ಲಾ ಆಷ್ಮಾ- ಕಾಂಗ್ರೆಸ್, ರುಕ್ಮಣಿ ಬಡಿಗೇರ- ಬಿಜೆಪಿ

14: ಶಶಿಕಲಾ ಗಂಗಪ್ಪನ್ನವರ- ಕಾಂಗ್ರೆಸ್, ಶೋಭಾ ಚವ್ಹಾಣ- ಬಿಜೆಪಿ

15: ಕಿರಣ ಪಾಟೀಲ- ಬಿಜೆಪಿ, ನಿಂಗಪ್ಪ ಶಿವನಗುಡಿ- ಪಕ್ಷೇತರ, 

ಉಮೇಶ್ವರ ಹೊಂಗಲ- ಕಾಂಗ್ರೆಸ್

16: ಶಿವಲೀಲಾ ಗದಗಿಮಠ- ಕಾಂಗ್ರೆಸ್, ಲಕ್ಷ್ಮೀ ಬಡಿಗೇರ- ಬಿಜೆಪಿ

ಸುವರ್ಣಾ ಆನಿಮಠ- ಜೆಡಿಎಸ್

17: ಅಷ್ಪಾಕ ಹವಾಲ್ದಾರ- ಕಾಂಗ್ರೆಸ್, ದೌವಲತ್ ಪರಂಡೇಕರ- ಬಿಜೆಪಿ

18: ಉಮೇಶ ಶೆಟ್ಟರ- ಕಾಂಗ್ರೆಸ್,  ಸಂಗಪ್ಪ ನರಗುಂದ- ಬಿಜೆಪಿ 

 

0/Post a Comment/Comments