ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ - Kittur



 
ಭುಗಿಲೆದ್ದ ಕಾರ್ಯಕರ್ತರ ಅಸಮಾಧಾನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಕಾಂಗ್ರೆಸ್ ಮುಖಂಡರು ಅಂತಿಮಗೊಳಿಸಿದ್ದ ಪಟ್ಟಣ ಪಂಚಾಯ್ತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇಬ್ಬರು ಹೆಸರುಗಳನ್ನು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೈ ಬಿಟ್ಟಿರುವ ಜಿಲ್ಲಾ ಕಾಂಗ್ರೆಸ್ ಸಮಿತಿ ಕ್ರಮದಿಂದಾಗಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಈ ಹಠಾತ್ ಬದಲಾವಣೆಯು  ಜಿಲ್ಲಾ ಮುಖಂಡರ ವಿರುದ್ಧ ಆಕ್ರೋಶದ ಕಿಡಿ ಹೊತ್ತಿಸಿದೆ. ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಆಗಮಿಸಿದ್ದ ಗ್ರಾಮೀಣ ಜಿಲ್ಲಾ  ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿನಯ ನಾವಲಗಟ್ಟಿ, ಕಿತ್ತೂರು ಮತಕ್ಷೇತ್ರದ ವೀಕ್ಷಕ ಬಂಗಾರೇಶ ಹಿರೇಮಠ ಅವರಲ್ಲಿ ಪ್ರಮುಖರು ಬೇಸರ ವ್ಯಕ್ತಪಡಿಸಿದರು.


ಪತ್ರಕರ್ತರು ಈ ಬಗ್ಗೆ  ಮುಖಂಡರನ್ನು ಪ್ರಶ್ನಿಸಿದಾಗ, ಎಲ್ಲ ಪಕ್ಷಗಳಲ್ಲಿರುವಂತೆ ಟಿಕೆಟ್ ಹಂಚಿಕೆ ಸಮಯದಲ್ಲಿ  ಅಸಮಾಧಾನ, ಭಿನ್ನಾಭಿಪ್ರಾಯ ಇರುವುದು ಸಹಜ. ಇದನ್ನು ಪಕ್ಷ ಬಗೆಹರಿಸಿಕೊಳ್ಳುತ್ತದೆ. ಸ್ಥಳೀಯ   ಮುಖಂಡರು ಅಂತಿಮಗೊಳಿಸಿ ನೀಡಿದ ಅಭ್ಯರ್ಥಿಗಳಿಗೆ ‘ಬಿ ಫಾರ್ಮ್' ವಿತರಿಸಲಾಗಿದೆ   ಎಂದು ಸಮರ್ಥಿಸಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ, ಮುಖಂಡರಾದ ಸೈಯ್ಯದ ಮನ್ಸೂರ, ಹಬೀಬ ಶಿಲೇದಾರ,   ರಾಜಾಸಲೀಮ್ ಕಾಶೀಮ್‍ನವರ, ರಮೇಶ ಮೊಕಾಶಿ, ರಾಮು  ಡವಳೆ, ಮುದಕಪ್ಪ ಮರಡಿ, ಚನಗೌಡ ಪಾಟೀಲ, ಸಂಜೀವ ಲೋಕಾಪುರ, ರುದ್ರಪ್ಪ ದೊಡಮನಿ, ವಿಶ್ವಜೀತ್ ಬಾವಾನವರ  ಉಪಸ್ಥಿತರಿದ್ದರು.

0/Post a Comment/Comments