ಪಟ್ಟಣ ಪಂಚಾಯ್ತಿ ಚುನಾವಣೆ; ಬಿಜೆಪಿ ಅಭ್ಯರ್ಥಿಗಳ ಘೋಷಣೆ - Click...
ಚನ್ನರಾಜ ಗೆಲುವು: ಕಿತ್ತೂರಲ್ಲಿ ಸಂಭ್ರಮಾಚರಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತ ಪಡೆದು ಚನ್ನರಾಜ ಹಟ್ಟಿಹೊಳಿ ಆಯ್ಕೆಯಾಗಿದ್ದರಿಂದ ಕಿತ್ತೂರಲ್ಲಿ ಮಂಗಳವಾರ ಸಂಭ್ರಮಾಚರಣೆ ನಡೆಯಿತು.
ಗುರುವಾರ ಪೇಟೆಯ ಚನ್ನಮ್ಮ ವರ್ತುಲದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಪಟ್ಟರು.
ಕುಲವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿಷ್ಟಪ್ಪ ಶಿಂಧೆ, ಸದಸ್ಯರಾದ ಮಹಾಂತೇಶ ಎಮ್ಮಿ, ದಶರಥ ಮಡಿವಾಳರ, ಕಿರಣ ವಾಲಿಕಾರ, ಕಾರ್ಯಕರ್ತರಾದ ಕೃಷ್ಣಾ ಬಾಳೇಕುಂದ್ರಿ, ಆಶ್ಫಾಕ್ ಹವಾಲ್ದಾರ್, ಅಸ್ಲಾಂ ನೇಸರಗಿ, ರಾಜು ದೊಡ್ಡನಾಯ್ಕರ, ಕಾಸೀಮ್ ನೇಸರಗಿ, ರಾಮಲಿಂಗ ಬಸೆಟ್ಟಿ, ಪ್ರವೀಣಗೌಡ ಜಕ್ಕನಗೌಡ್ರ, ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
Post a Comment