ಸಂಗೊಳ್ಳಿ ರಾಯಣ್ಣ ಯುವ ಸಂಘಟನೆಯಿಂದ ತೀವ್ರ ಸಂತಾಪ - Kittur


 ಬಿಪಿನ್ ರಾವತ್ ನಿಧನಕ್ಕೆ ತೀವ್ರ ಸಂತಾಪ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾಧಿಕಾರಿಗಳ ನಿಧನಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸನ್ನವರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಇಲ್ಲಿಯ ಚನ್ನಮ್ಮ ವರ್ತುಲದಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸೇನಾ ಮುಖ್ಯಸ್ಥ ಮತ್ತು ಇತರರ ದುರಂತ ಸಾವಿನಿಂದಾಗಿ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಹಠಾತ್   ಸಂಭವಿಸಿದ ಈ ದುರ್ಘಟನೆಯಿಂದಾಗಿ ಎಲ್ಲರಿಗೂ ದಿಗ್ಭ್ರಮೆಯಾಗಿದೆ ಎಂದು ಶೋಕಪಟ್ಟರು.

ರಾವತ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಅನಂತರ ಒಂದು ನಿಮಿಷ ಮೌನಾಚರಣೆ ನೆರವೇರಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಬಿಷ್ಟಪ್ಪ ಶಿಂಧೆ, ಅಶೋಕ ಮಾಳಗಿ, ಸದಸ್ಯ ಮಹಾಂತೇಶ ಎಮ್ಮಿ, ದಶರಥ ಮಡಿವಾಳರ, ಸಂಘಟನೆ ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಗಿ ಸದಸ್ಯರಾದ ಮಂಜುನಾಥ ಮಲಶೆಟ್ಟಿ, ಅಜ್ಜಪ್ಪ ಗುದಗಿ, ಪ್ರಶಾಂತ ಮಲಶೆಟ್ಟಿ ಇತರರು ಇದ್ದರು.

0/Post a Comment/Comments