ಉತ್ತರ ಕರ್ನಾಟಕ ಪ್ರತಿಭೆಗಳಿಂದ *ಕಾಯುತ್ತಿರುವೆ* ಸಾಂಗ್ ಬಿಡುಗಡೆ-Kayutiruve

 

ಉತ್ತರ ಕರ್ನಾಟಕ ಪ್ರತಿಭೆಗಳಿಂದ *ಕಾಯುತ್ತಿರುವೆ* ಸಾಂಗ್ ಬಿಡುಗಡೆ


ಧಾರವಾಡ: ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರತಿಭೆಗಳಿವೆ ಆದರೆ, ಪ್ರತಿಭೆಗಳಿಗೆ ತಕ್ಕಂತೆ ವೇದಿಕೆಗಳು ಸಿಗುತ್ತಿಲ್ಲ, ಉತ್ತರ ಕರ್ನಾಟಕದ ಧಾರವಾಡ ಮತ್ತು ಇಳಕಲ್ಲ ಕಲಾವಿದರು ಸೇರಿ UK Talents Show ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣಗೊಂಡ "ಕಾಯುತ್ತಿರುವೆ" ಎಂಬ ಕನ್ನಡ ಸಾಂಗ್ ಅನ್ನು ಬಿಡುಗಡೆ ಮಾಡಲು ತಂಡ ಸಿದ್ದತೆಯಾಗಿದ್ದು, ಇದೇ ಭಾನುವಾರ Lilsaaa ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತದೆ ಎಂದು ಕನ್ನಡ Rapper ಅಭಿಷೇಕ್ ದೇವ್ ರವರು ತಿಳಿಸಿದರು.

ಈ ಸಾಂಗ್ ಗೆ ಜವಾರಿ ಪರಿವಾರ ತಂಡ ನಿರ್ದೇಶನ ಮಾಡಿದ್ದು, ಕಿರಣ್, ವೈಬ್ ಗುರು, ಕಾಶೀನಾಥ್ ರವರು ಕ್ಯಾಮೆರಾ ಚಾಲನೆ ಮಾಡಿದ್ದಾರೆ,ಇನ್ನೂ ಸಾಂಗ್ ನಲ್ಲಿ ಹುಬ್ಬಳ್ಳಿಯ ಹುಡುಗಿ ಸ್ವಾತಿ ಹೆಬ್ಬಾಳಕರ್,ಅಭಿಷೇಕ್ ದೇವ್ ಮತ್ತು ಲಿಲ್ಸಾ ರವರು ನಟಿಸಿದ್ದಾರೆ, ಪೋಸ್ಟರ್, ಸಂಕಲನವನ್ನು ಕ್ಯಾಟ್ ಬುಡ್ಡು ಮತ್ತು ಸೆವೆಗ್ ಮ್ಯಾಕ್ಸ್ ರವರು ಮಾಡಿದ್ದಾರೆ.

ಉತ್ತರ ಕರ್ನಾಟಕದ ಪ್ರತಿಭೆಗಳು ನಿರ್ಮಿಸಿರುವ ಈ ಹಾಡಿನ ಪೋಸ್ಟರ್ www.uktalentshow ನಲ್ಲಿ 10,000+ ವೀಕ್ಷಣೆ ಪಡೆದಿದ್ದು, ಕಾಯುತ್ತಿರುವೆ ತಂಡಕ್ಕೆ UK Talent Show ಮತ್ತು ಜವಾರಿ ಪರಿವಾರ ತಂಡದವರು ಶುಭಾಶಯ ಕೋರಿದ್ದಾರೆ.


0/Post a Comment/Comments