ಮತದಾರರಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಕೃತಜ್ಞತೆ


 ಮತದಾರರಿಗೆ ದೊಡ್ಡಗೌಡರ ಕೃತಜ್ಞತೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಡಿ. 10 ರಂದು  ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಎಲ್ಲ ಮತದಾರರಿಗೆ ಶಾಸಕ ಮಹಾಂತೇಶ ದೊಡ್ಡಗೌಡರ ಕೃತಜ್ಞತೆ ಸಲ್ಲಿಸಿದ್ದಾರೆ. 

ಬಿಜೆಪಿ ಅಧಿಕೃತ  ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಪರವಾಗಿ ದುಡಿದ ಪಕ್ಷದ ಕಿತ್ತೂರು ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಪದಾಧಿಕಾರಿಗಳು, ಎಲ್ಲ ಹಿರಿಯ ಮುಖಂಡರಿಗೆ ಹಾಗೂ  ಕಾರ್ಯಕರ್ತರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅವರು ತಿಳಿಸಿದರು.

ಪಕ್ಷದ ಒಗ್ಗಟ್ಟು, ಕಾರ್ಯಕರ್ತರು ಮಾಡಿದ ಪ್ರಾಮಾಣಿಕ ಕಾರ್ಯ ಕವಟಗಿಮಠ ಅವರಿಗೆ ಗೆಲುವು ತಂದುಕೊಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

0/Post a Comment/Comments