‘ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ' : ಗೀತಾ ಎಸ್.



 ‘ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ'

ಪ್ರೆಸ್‍ಕ್ಲಬ್ ವಾರ್ತೆ

ತಿಗಡೊಳ್ಳಿ: ಮಕ್ಕಳಿಗೆ ಮನೆಯಲ್ಲಿ ಪಾಲಕರು ಒಳ್ಳೆಯ ಸಂಸ್ಕಾರ ನೀಡಬೇಕು. ಅವರನ್ನು ಉತ್ತಮ ನಾಗರಿಕರಾಗಿ ರೂಪಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ಕಚೇರಿ ತಾಂತ್ರಿಕ ಪ್ರಬಂಧಕಿ ಗೀತಾ ಎಸ್. ಸಲಹೆ ನೀಡಿದರು.

ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸಂಸ್ಥೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ಆಶಾಕಿರಣ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳಾ ಜ್ಞಾನ ವಿಕಾಸ ಕೇಂದ್ರವು ಹೇಮಾವತಿ ಅಮ್ಮನವರ ಕನಸಿನ ಕೂಸು.  ಈ ಕೇಂದ್ರದ ಎಲ್ಲ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. 

ಸದಸ್ಯೆಯರಿಗೆ ರಂಗೋಲಿ, ರಸಪ್ರಶ್ನೆ, ಜನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ವೈಶಾಲಿ ಅಳಗುಂಡಿ, ಬಿ. ಐ. ಕರೆಪ್ಪನವರ ನಿರ್ಣಾಯಕರಾಗಿ ಆಗಮಿಸಿದ್ದರು. 

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸವಿತಾ ಗೋದಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಕಳಸಣ್ಣವರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋಪಾಲ ಹುಕ್ಕೇರಿ, ಸಮನ್ವಂiÀi ಅಧಿಕಾರಿ ಗೀತಾ, ಸಂಧ್ಯಾ, ದ್ರಾಕ್ಷಾಯಿಣಿ, ಕಮಲ ಸರಸ್ವತಿ, ಕೇಂದ್ರದ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಲಯ ಮೇಲ್ವಿಚಾರಕಿ ನಾಗರತ್ನ ಸ್ವಾಗತಿಸಿದರು. ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ ರಾಯನಾಳ ನಿರೂಪಿಸಿದರು. 

0/Post a Comment/Comments