ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಸಡಗರ - Bailhongal


 
ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತೀಕ ಸಡಗರ

ಪ್ರೆಸ್‍ಕ್ಲಬ್ ವಾರ್ತೆ

ಬೈಲಹೊಂಗಲ: ಕಾರ್ತೀಕ ಮಾಸದ ಕೊನೆಯ ದಿನವಾಗಿದ್ದ ಶನಿವಾರ ಇಲ್ಲಿಯ ಬಸವ ನಗರದಲ್ಲಿರುವ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಂಭ್ರಮ ಮನೆ ಮಾಡಿತ್ತು. ನೂರಾರು ಹಣತೆ ಹಚ್ಚಿ, ಮಾತೆಗೆ ಬೆಳಗಿ ಭಕ್ತರು ಸಾರ್ಥಕ್ಯ ಭಾವ ಮೆರೆದರು.

ಈ ಸಂದರ್ಭದಲ್ಲಿ ಧರ್ಮದರ್ಶಿ ವೇದಮೂರ್ತಿ ಡಾ. ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ ಮಾತನಾಡಿ, ಕಾರ್ತೀಕ ಮಾಸದಲ್ಲಿ ಮಂದಿರದಲ್ಲಿ ದೀಪಾರಾಧನೆ ಮಾಡುವುದರಿಂದ ಬದುಕಿನ ಕತ್ತಲು ದೂರವಾಗುತ್ತದೆ. ಕಷ್ಟಗಳು ಮಾಯವಾಗಿ ಮನೆತನ ಬೆಳಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಗೀತಾಂಜಲಿ ಆರಾದ್ರಿಮಠ, ಪ್ರೀತಿ ಆರಾದ್ರಿಮಠ, ಜಯಶ್ರೀ ಹಿರೇಮಠ, ಅನು ಕಾಜಗಾರ, ನಾಗಯ್ಯ ಹಿರೇಮಠ, ಕಾಶಮ್ಮ ಮಠಪತಿ, ವಿಜಯಕುಮಾರ್ ಆರಾದ್ರಿಮಠ, ದುರ್ಗಾದೇವಿ ದೇವಸ್ಥಾನದ ಸಮಸ್ತ ಸದ್ಭಕ್ತ ಮಂಡಳಿ ಹಾಗೂ ಮಹಿಳೆಯರು ಈ ಸಂದರ್ಭದಲ್ಲಿ ಹಾಜರಿದ್ದರು.

0/Post a Comment/Comments