ಕಿತ್ತೂರು: ಶೇ 77.65 ಮತದಾನ -Kittur


 ಕಿತ್ತೂರು:  ಶೇ 77.65 ಮತದಾನ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯ್ತಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 77.65 ಮತದಾನವಾಗಿದೆ.  14005 ಮತದಾರರಲ್ಲಿ 10875 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 6 ವಾರ್ಡಿನಲ್ಲಿ ಶೇ 89.56 ಗರಿಷ್ಠ ಮತದಾನವಾಗಿದ್ದು,  2 ನೇ ವಾರ್ಡಿನಲ್ಲಿ ಕನಿಷ್ಠ ಅಂದರೆ ಶೇ 68.33 ಮತದಾನವಾಗಿದೆ ಎಂದು ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ತಿಳಿಸಿದರು.

ಮತದಾನ ಬಿರುಸಿನಿಂದ ಕೂಡಿತ್ತು.  ತಾವು ವಾಸಿಸುವ ವಾರ್ಡುಗಳಲ್ಲಿ ಕೆಲವು ಮತದಾರರ ಹೆಸರುಗಳು ಕಾಣೆಯಾಗಿ ಬೇರೆ ವಾರ್ಡುಗಳಲ್ಲಿ ಬಂದಿದ್ದವು. ಇದರಿಂದಾಗಿ ಅವರಲ್ಲಿ ಸ್ವಲ್ಪ ಗೊಂದಲದ ವಾತಾವರಣ ಮೂಡುವುದಕ್ಕೆ ಕಾರಣವಾಗಿತ್ತು. 

ಒಂದು ನಿಮಿಷ ಬಾಕಿ ಇರುವಾಗ 4 ನೇ ವಾರ್ಡಿನ ಮತಗಟ್ಟೆಗೆ ಮಹಿಳಾ ಮತದಾರರೊಬ್ಬರು ಓಡೋಡಿ ಬಂದರು. ಇಲ್ಲಿ ಮತವಿಲ್ಲ, ಪಕ್ಕದ ಮತಗಟ್ಟೆಯಲ್ಲಿ ಇರಬಹುದು ಎಂದು ಮತಗಟ್ಟೆ ಅಧಿಕಾರಿ ಹೇಳಿ ಕಳಿಸಿದರು. ಅಲ್ಲಿಂದ ಇಲ್ಲಿಲ್ಲ ಎಂಬ ಮಾತು ಕೇಳಿ ಬಂತು.  ಮತ್ತೆ ಮರಳಿ 4 ನೇ ವಾರ್ಡಿನ ಮತಗಟ್ಟೆಗೆ ಆಗಮಿಸಿದರು.  ಹಾಕಿದ್ದ ಮತಕೇಂದ್ರದ ಬಾಗಿಲು ತೆಗೆಯಿಸಿ ಅವರು ಮತ ಚಲಾಯಿಸಿದ್ದು ಗಮನ ಸೆಳೆಯಿತು.

610- 1 ನೇ ವಾರ್ಡ(ಶೇ81.44 ), 518- 2ನೇ ವಾರ್ಡು(ಶೇ 68.33), 685- 3 ನೇ ವಾರ್ಡು(ಶೇ 73.81 ), 539- 4 ನೇ ವಾರ್ಡು(ಶೇ 80.68), 575- 5 ನೇ ವಾರ್ಡು(ಶೇ 72.67), 790- 6 ನೇ ವಾರ್ಡು(ಶೇ 89.56 ), 802- 7 ನೇ ವಾರ್ಡು(ಶೇ 82.76), 668- 8 ನೇ ವಾರ್ಡು(ಶೇ 75.48), 869- 9 ನೇ ವಾರ್ಡು(ಶೇ73.70 ), 860- 10 ನೇ ವಾರ್ಡು(ಶೇ79.77 ), 637- 11 ನೇ ವಾರ್ಡು(ಶೇ 72.88), 592-12 ನೇ ವಾರ್ಡು(ಶೇ 75.60), 555- 13 ನೇ ವಾರ್ಡು(ಶೇ 73.60), 529- 14 ನೇ ವಾರ್ಡು(ಶೇ 89.35), 361- 15 ನೇ ವಾರ್ಡು(ಶೇ 72.92), 630- 16 ನೇ ವಾರ್ಡು(ಶೇ70.86 ), 413-17 ನೇ ವಾರ್ಡು(ಶೇ83.26 ), 442- 18 ನೇ ವಾರ್ಡು(ಶೇ.86.66 ).

0/Post a Comment/Comments