‘ಆಧ್ಯಾತ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ’
ಪ್ರೆಸ್ಕ್ಲಬ್ ವಾರ್ತೆ
ವೀರಾಪೂರ: ಪ್ರವಚನ ಆಲಿಸುವುದು, ಸತ್ಸಂಗ ಮಾಡುವುದು ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಭಕ್ತರಿಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಕೇದಾರ ಪೀಠದ ಮುತ್ನಾಳ ಶಾಖೆಯ ಪೀಠಾಧ್ಯಕ್ಷ ಷ. ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಖಾನಾಪುರ ತಾಲೂಕಿನ ಬೋಗೂರ ಗ್ರಾಮದೇವತೆ ಜಾತ್ರಾ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಒಳ್ಳೆಯ ಚಿಂತನೆಗಳಿಂದ ಚಿಂತೆಗಳು ದೂರಾಗುತ್ತವೆ. ಬದುಕು ಹಗುರ ಎನಿಸುತ್ತದೆ. ಹೀಗಾಗಿ ಭಕ್ತರು ಹೆಚ್ಚು ಸಂಖ್ಯೆಯಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಿ ಇದರ ಆನಂದವನ್ನು ಪಡೆಯಬೇಕು ಎಂದು ಕೋರಿದರು.
ಬಿಜೆಪಿ ಮುಖಂಡ ಸುಭಾಸ ಗುಳ್ಳೆಶೆಟ್ಟಿ, ಬಾಬಣ್ಣ ಪಾಟೀಲ್. ಮೋಹನ್ ಕಂಚಿ, ದಶರಥ ಬನೋಶಿ, ಗ್ರಾಮದ ಹಿರಿಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.