ವೀರಾಪುರ: ಕಾನೂನು ಅರಿವು-ನೆರವು ಕಾರ್ಯಕ್ರಮ - Virapur


  ಮೃತಪಟ್ಟವರ ಅಂತ್ಯಕ್ರಿಯೆಗೂ ಇಲ್ಲಿ ಸಂಕಷ್ಟ - click...

ವೀರಾಪುರ: ಕಾನೂನು ಅರಿವು-ನೆರವು ಕಾರ್ಯಕ್ರಮ

ಪ್ರೆಸ್‍ಕ್ಲಬ್ ವಾರ್ತೆ

ವೀರಾಪುರ: ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಕಿತ್ತೂರು ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಶನಿವಾರ ಜರುಗಿತು.

ವಕೀಲರಾದ ಎಸ್. ಡಿ. ಬೋಗೂರ ಮಾತನಾಡಿ, ಗ್ರಾಮೀಣ ಜನರಿಗೆ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲು  ಈ ಕಾರ್ಯಕ್ರಮ ಆಯೋಜಿಸಲಾಗಿದೆ.    ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಕೀಲರಾದ ಎ. ಎಂ. ಸಿದ್ರಾಮಣಿ ಮತ್ತು ಎಸ್. ಎಂ. ಹಳೇಮನಿ ಅವರು ಮೋಟಾರ್ ಕಾಯ್ದೆ ಹಾಗೂ ಜನನ, ಮರಣ ವ್ಯಾಜ್ಯಗಳ ಕಾನೂನು ನಿಯಮಗಳ ಕುರಿತು ಮಾತನಾಡಿ ಕೆಲವು ಸಲಹೆಗಳನ್ನು ನೀಡಿದರು.

ವಕೀಲರಾದ ಎ. ಬಿ. ಲದ್ದಿಗಟ್ಟಿ, ಬಿ. ಕೆ. ಸವದತ್ತಿ, ಕೆ. ಸಿ. ಕೊಡ್ಲಿ, ಸಿ. ಸಿ. ಗಡಾದ, ಶಿರಸ್ತೇದಾರ್ ಸಂಪಂಗಿ ಅವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂಗಪ್ಪ ಪಿಸೆಣ್ಣವರ, ಸದಸ್ಯರು, ಗ್ರಾಮದ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.

ಪತ್ರಕರ್ತ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ  ರಾಜೇಶ್ವರಿ ಪಟ್ಟಣಶೆಟ್ಟಿ ವಂದಿಸಿದರು.

0/Post a Comment/Comments