ತತ್-ಚಿತ್ ಆನಂದವೇ ಭಾಗವತ ಪುರಾಣ : ಚನ್ನಬಸವ ದೇವರು - Turamari


 
ತತ್-ಚಿತ್ ಆನಂದವೇ ಭಾಗವತ ಪುರಾಣ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನಕಿತ್ತೂರು: ಸರ್ವಾಂತರ್ಯಾಮಿಯಾಗಿರುವ  ಶ್ರೀಮನ್ ನಾರಾಯಣನ ಸ್ಮರಣೆ ಮಾಡುವುದು, ಈ ಮೂಲಕ ವೈರಾಗ್ಯ ಪಡೆದುಕೊಂಡು ಸತ್‍ಚಿತ್ ಆನಂದದಲ್ಲಿ ಲೀನವಾಗುವುದೇ ಭಾಗವತ ಪುರಾಣದ ತಿರುಳಾಗಿದೆ ಎಂದು ಬೀಳಗಿಯ ಚನ್ನಬಸವ ದೇವರು ತಿಳಿಸಿದರು.

ಕಿತ್ತೂರು ತಾಲೂಕಿನ ತುರಮರಿ ಗ್ರಾಮದ ಗುರು ಮಡಿವಾಳೇಶ್ವರ ಮಠದಲ್ಲಿ ಹಮ್ಮಿಕೊಳ್ಳಲಾಗಿರುವ 25 ನೇ ವರ್ಷದ ಭಾಗವತ ಪುರಾಣ ಸಪ್ತಾಹದ ಮೂರನೇ ದಿನವಾದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು  ಆಶೀರ್ವಚನ ನೀಡಿದರು.

'ಬಾ' ಎಂದರೆ ಭಗವಾನ್ ನಾರಾಯಣನ ಸ್ಮರಣೆ, 'ಗ' ಎಂದರೆ ಜ್ಞಾನ, ವೈರಾಗ್ಯ ಪಡೆಯುವುದು 'ತ' ಎಂದರೆ ತತ್‍ಚಿತ್ ಆನಂದ ಪಡೆಯುವುದೇ ಭಾಗವತ ಪುರಾಣ. ಇದನ್ನು ವೇದವ್ಯಾಸರು ಹೇಳಿದ್ದಾರೆ ಎಂದು ಅವರು ವಿಶ್ಲೇಷಿಸಿದರು.

ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಭಾಗವತ ಪುರಾಣ ಏರ್ಪಡಿಸುತ್ತ ಬಂದಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಹುಲಿಕಟ್ಟಿ ಹೊಸಕೇರಿ ಮಠದ ಲಿಂಗಾನಂದ ಸ್ವಾಮೀಜಿ, ಹಾರುಗೊಪ್ಪ ಚನ್ನವೃಷಭೇಂದ್ರ ಆಶ್ರಮದ ಶಿವಯೋಗಿನಿ ದೇವಿ ಆಶೀರ್ವಚನ ನೀಡಿದರು. ಚಿಕ್ಕಮುನವಳ್ಳಿ ಆಶ್ರಮದ ಶಿವಪುತ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಗಂಗಾಧರ ಶೀಗಿಹಳ್ಳಿ, ನಿವೃತ್ತ ಪ್ರಧಾನಗುರು ಎಂ. ಎಫ್. ಜಕಾತಿ, ಸುತ್ತಲಿನ ಗ್ರಾಮಗಳ ಭಕ್ತರು ಹಾಜರಿದ್ದರು.

0/Post a Comment/Comments