ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಗ್ರಾಮೀಣ ಸೇನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ಯುವಕರು ಬೆಳಗಿನ ಜಾಗಿಂಗ್‍ಗೆ ಹೊರಡಲು ರಸ್ತೆ ಪಕ್ಕ ನಿಂತಿದ್ದಾಗ ವೇಗವಾಗಿ ಬಂದ ಬೊಲೊರೊ ವಾಹನ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, ಐವರಿಗೆ ತೀವ್ರ ಗಾಯಗಳಾದ ದುರ್ಘಟನೆ ಮಂಗಳವಾರ ಗಿರಿಯಾಲ ಕೆಎ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಈ ಘಟನೆಯಲ್ಲಿ ಕುಷ್ಟಗಿ ತಾಲ್ಲೂಕಿನ ಹನುಮನಾಳ ಗ್ರಾಮದ ಸಂಗಮೇಶ ಬಸವರಾಜ ರೋಣದ (19) ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ.
ಇದೇ ಊರಿನ ರಾಮನಗೌಡ ಪೊಲೀಸ್ (19), ಹೊಸೂರ ಗ್ರಾಮದ ಮಲ್ಲಿಕಾರ್ಜುನ ಹಡಪದ (19), ದಿಂಡಲಕೊಪ್ಪದ ಅಭಿಜೀತ್ ಪಾಟೀಲ (20), ಗೋಕಾಕ ತಾಲ್ಲೂಕಿನ ಢವಳೇಶ್ವರದ ರಾಜು ಕುಂಬಾರ (18), ಸವದತ್ತಿ ತಾಲ್ಲೂಕಿನ ದೂಪದಾಳದ ಮೌಲಾಸಾಬ ಗಿಡದನ್ನವರ (18) ಅವರಿಗೆ ಗಾಯಗಳಾಗಿದ್ದು, ಇವರಲ್ಲಿ ಮೌಲಾಸಾಬ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲ ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗಮೇಶನ ಮೃತದೇಹದ ಮರಣೋತ್ತರ ಪರೀಕ್ಷೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ಅನಂತರ ಶವವನ್ನು ಅವರ ಪಾಲಕರು ಊರಿಗೆ ತೆಗೆದುಕೊಂಡು ಹೋದರು.
ಘಟನೆಗೆ ಕಾರಣನಾದ ಮುಂಡರಗಿ ತಾಲ್ಲೂಕಿನ ಮುರಡಿ ತಾಂಡಾದ ವಾಹನ ಚಾಲಕ ಕೃμÁ್ಣ ನಗರ ಪರಾರಿಯಾಗಿದ್ದಾನೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಗ್ನಗೊಂಡ ಕನಸು
ಸೇನೆ ಸೇರಿ ದೇಶಸೇವೆ ಮಾಡಬೇಕು ಎಂಬ ಕನಸು ಹೊತ್ತು ಬಂದಿದ್ದ ಸಂಗಮೇಶ ಈ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಈತನ ಐವರು ಸ್ನೇಹಿತರು ಚೇತರಿಸಿಕೊಳ್ಳಬೇಕೆಂದರೂ ಕೆಲ ತಿಂಗಳು ಬೇಕಾಗಬಹುದು ಎನ್ನಲಾಗಿದೆ.
Post a Comment