ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪತಿ ಮಾಡಿರುವ ಕೆಲಸಗಳನ್ನು ಕಂಡಾಗ ಅವರ ಬಗ್ಗೆ ಅಭಿಮಾನವೆನಿಸುತ್ತದೆ. ಮತದಾರರು ಅವರ ಕೆಲಸಗಳನ್ನು ಹೆಚ್ಚು ನೆನಪಿಟ್ಟುಕೊಂಡಿದ್ದಾರೆ..
ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮರು ಆಯ್ಕೆ ಬಯಸಿ ಬಿಜೆಪಿಯಿಂದ ಸ್ಪರ್ಧಿಸಿರುವ ಹಾಗೂ ‘ಹ್ಯಾಟ್ರಿಕ್' ಗೆಲುವಿನ ನಿರೀಕ್ಷೆಯಲ್ಲಿರುವ ಮಹಾಂತೇಶ ಕವಟಗಿಮಠ ಅವರ ಬಗ್ಗೆ ಪತ್ನಿ ರಾಜೇಶ್ವರಿ ಆಡಿದ ಹೆಮ್ಮೆಯ ನುಡಿಗಳಿವು.
ಖಾನಾಪುರ ಹಾಗೂ ಕಿತ್ತೂರು ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಚಾರ ಸಭೆಯಲ್ಲಿ ಭಾಗವಹಿಸಿರುವೆ. ಮತದಾರರು ಅವರ ಕಡೆಗೆ ಹೆಚ್ಚು ಒಲವು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಕಡೆಗೆ ಒಳ್ಳೆಯ ವಾತಾವರಣವಿದೆ ಎಂದು ತಿಳಿಸಿದರು.
ಈಗಾಗಲೇ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಇನ್ನೂ ಅವರಿಂದ ಹೆಚ್ಚಿನ ಕೆಲಸ ಬಯಸಿದ್ದಾರೆ. ಗುಡಿಗಳ ಜೀರ್ಣೋದ್ಧಾರ, ವಸತಿ ರಹಿತರಿಗೆ ಮನೆ, ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳನ್ನು ಜನರು ಹೆಚ್ಚು ಬಯಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಪ್ರಥಮ ಬಾರಿ ಪತಿಯ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಚಾಲೇಂಜ್ ಆಗಿ ಅಂತಾ ಏನೂ ಸ್ವೀಕರಿಸಿಲ್ಲ. ನಾವೂ ಅವರು ಮಾಡಿದ ಕೆಲಸಗಳನ್ನು ಕಣ್ಣಾರೆ ನೋಡುವಂತಾಗಿದೆ. ಅವರು ಮಾಡಿದ ಕೆಲಸಗಳು ನಮಗೂ ಹೆಮ್ಮೆ ತರುವಂಥದ್ದಾಗಿವೆ ಎಂದು ಪುನರುಚ್ಛರಿಸಿದರು.
ಶಾಸಕ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕವಟಗಿಮಠ ಅವರ ಪುತ್ರಿ ಸುಷ್ಮಾ, ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ವಕೀಲರ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ಬಿಜೆಪಿ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಮುಖಂಡರಾದ ಸಂದೀಪ ದೇಶಪಾಂಡೆ, ಉಳವಪ್ಪ ಉಳ್ಳೇಗಡ್ಡಿ, ಬಸವರಾಜ ಮಾತನವರ, ಅಪ್ಪಣ್ಣ ಮುಷ್ಟಗಿ, ಮಹಾಂತೇಶ ಕರಬಸನ್ನವರ, ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು.
Post a Comment