ನಿವೃತ್ತ ವ್ಯಕ್ತಿಗಳ ತಾಣವಾಗಿರುವ ಕನ್ನಡ ಸಾಹಿತ್ಯ ಪರಿಷತ್ : ರಾಜಶೇಖರ ಮುಲಾಲಿ ಬೇಸರ- click...
ಟ್ರ್ಯಾಕ್ಟರ್ ಉರುಳಿ ಬಿದ್ದು ಅದರಡಿ ಸಿಕ್ಕ ಬಾಲಕ ಸಾವು
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಹೊಲದಲ್ಲಿ ರೂಟರ್ ಹೊಡೆಯುತ್ತಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ, ಕೆಳಗಿನ ಗದ್ದೆಯಲ್ಲಿ ನೋಡುತ್ತ ನಿಂತಿದ್ದ ಬಾಲಕ ಅದರಡಿ ಸಿಕ್ಕು ಸಾವನ್ನಪ್ಪಿದ ದಾರುಣ ಘಟನೆ ತಾಲೂಕಿನ ಕತ್ರಿದಡ್ಡಿಯಲ್ಲಿ ಬುಧವಾರ ಜರುಗಿದೆ.
ಅದೇ ಗ್ರಾಮದ ಮುತ್ತಪ್ಪ ಮಾರುತಿ ಖನಗಾಂವಿ (15)ಮೃತ ದುರ್ದೈವಿ ಬಾಲಕ. ಗಲಗಿನಮಡದ ಟ್ರ್ಯಾಕ್ಟರ್ ಚಾಲಕ ಸುರೇಶ ನಿಂಗಪ್ಪ ಕರಿಕಟ್ಟಿ (40) ಈ ದುರ್ಘಟನೆಯಲ್ಲಿ ಗಾಯಗೊಂಡಿದ್ದು, ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕತ್ರಿದಡ್ಡಿಯ ಖನಗಾಂವಿ ಅವರ ಗದ್ದೆಯಲ್ಲಿ ರೂಟರ್ ಹೊಡೆಯುತ್ತಿದ್ದಾಗ ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ವಾಹನ ಚಲಾಯಿಸುತ್ತಿದ್ದಾಗ ಬದುವಿನ ಮೇಲೆ ಹತ್ತಿದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಉರುಳಿ ಬಿತ್ತು. ಪಕ್ಕದ ಗದ್ದೆಯಲ್ಲಿ ನಿಂತಿದ್ದ ಬಾಲಕ ಇದರಡಿ ಸಿಕ್ಕು ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment