ಬಸ್‍ ನಿಲ್ದಾಣಕ್ಕೆ ಬಣ್ಣದ ಮೆರುಗು ನೀಡಿದವರಾರು? - kittur





ಬಸ್‍ನಿಲ್ದಾಣಕ್ಕೆ ಬಣ್ಣದ ಮೆರುಗು
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ನಿಲ್ದಾಣ ಸ್ವಚ್ಛಗೊಳಿಸಿದರು,   ಬಣ್ಣ ಕಳೆದುಕೊಂಡು ಅಂದಗೆಟ್ಟು ಹೋಗಿದ್ದ ಅದಕ್ಕೆ ಬಣ್ಣದ ಮೆರುಗನ್ನೂ ನೀಡಿದರು..
ವರ್ಣರಂಜಿತವಾಗಿ  ಹಾಗೂ ಅರ್ಥಪೂರ್ಣವಾಗಿ ಈ ರೀತಿ ರಾಜ್ಯೋತ್ಸವ ಆಚರಿಸಿದ್ದು ಇಲ್ಲಿಯ ಸೋಮವಾರ ಪೇಟೆಯ ಗಣಪತಿ ಓಣಿಯ ಕ್ರಿಯಾಶೀಲ ಯುವಕರು.

ದಶಕಗಳ ಹಿಂದೆ ನಿರ್ಮಾಣವಾಗಿದ್ದ ಬಸ್ ನಿಲ್ದಾಣವಿದು. ಸ್ಚಚ್ಛತೆ ಕಾಣದ್ದರಿಂದ  ಒಳಗೆ ಕುಳಿತುಕೊಳ್ಳಲು ಪ್ರಯಾಣಿಕರು  ಮುಜುಗರ ಪಟ್ಟುಕೊಳ್ಳುತ್ತಿದ್ದರು. ಈ ವಿಷಯ ಅರಿತಿದ್ದ ಓಣಿಯ ಯುವಕರು ಅದಕ್ಕೆ ಅಂದದ ಮೆರುಗು ನೀಡಲು ತೀರ್ಮಾನಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಕಿರಣ ವಾಳದ ನೇತೃತ್ವದಲ್ಲಿ   ನಿಲ್ದಾಣ ಸ್ವಚ್ಛಗೊಳಿಸಿದರು.
ಅನಂತರ ಅರಿಷಿಣ ಕುಂಕಮದ ಕನ್ನಡ ನಾಡಧ್ವಜದ ಬಣ್ಣ ಬಳಿದರು. ಈ ಮೂಲಕ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಿದ್ದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. ರಾಷ್ಟ್ರೀಯ ಹಬ್ಬ, ನಾಯಕರ ಜಯಂತಿ ದಿನಗಳನ್ನು ಈ ರೀತಿ ರಚನಾತ್ಮಕವಾಗಿ ಆಚರಣೆ ಮಾಡಬೇಕು ಎಂಬ ಅಲಿಖಿತ ಸಂದೇಶವನ್ನೂ ಇವರ ಕಾರ್ಯ ಸಾರಿತ್ತು.
ಶ್ರೀಧರ ಲೋಕಾಪುರ, ವಿಶಾಲ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ. ಸತೀಶ ಲಂಗೋಟಿ, ವಿನಯ ಚಿನಗುಡಿ, ಶಂಕರ ಜಡಿ, ಅನಿಲ ಬೆಳವಡಿ, ರಾಜು ಚಿನಗುಡಿ, ಜ್ಯೋತಿಬಾ ಅವರು ಕಿರಣ ವಾಳದ ಅವರಿಗೆ ಸಾಥ್ ಕೊಟ್ಟಿದ್ದರು.

0/Post a Comment/Comments