ಧಣಿ ಬಂದರು ದಾರಿ ಬಿಡಿ - Kittur


ವಿಡಿಯೋ ನೋಡಿ....


ಧಣಿ ಬಂದರು ದಾರಿ ಬಿಡಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಸಾಲುಗಟ್ಟಿ ನಿಂತ ವಾಹನಗಳು, ಪ್ರೀತಿ, ಗೌರವ ಹೊರಸೂಸುತ್ತಿದ್ದ  ನೂರಾರು ಅಭಿಮಾನಿಗಳ ಕಂಗಳು, ಕೈಯಲ್ಲಿ ಹೂಗುಚ್ಛ, ಮಾಲೆ..

ಅಲ್ಲಿರುವ ದೃಶ್ಯ ನೋಡಿದವರಿಗೆ ಅನ್ನಿಸಿದ್ದು: ಯಾರೋ ಸಚಿವರು ಅಥವಾ ಮುಖ್ಯಮಂತ್ರಿ ಅವರೇ ಬರುತ್ತಿದ್ದಾರೇನೋ ಎಂದು. ಆದರೆ ಅವರ್ಯಾರು ಅಲ್ಲಿ ಬರುವವರಿರಲಿಲ್ಲ. ಬಂದಿದ್ದು, ಮಾಜಿ ಸಚಿವ, ಮಾಜಿ ಶಾಸಕ ಹಾಗೂ ಈ ಭಾಗದ ಪ್ರಭಾವಿ ಮುಖಂಡ ‘ನೇಗಿನಹಾಳ ಧಣಿ' ಡಿ. ಬಿ. ಇನಾಮದಾರ ಅವರು. 

ಅಧಿಕಾರದಲ್ಲಿರಲಿ, ಬಿಡಲಿ ತಮ್ಮ ನೈಜ ವರ್ಚಸ್ಸು, ದಕ್ಷತೆ, ಜನಪ್ರಿಯತೆ ಉಳಿಸಿಕೊಂಡು ಬಂದಿರುವವರು ಇನಾಮದಾರ. ಹೀಗಾಗಿಯೇ ಬೆಳಗಾವಿ ಜಿಲ್ಲೆಯ ಪ್ರವೇಶ ದ್ವಾರದಲ್ಲಿ ನೂರಾರು   ಅಭಿಮಾನಿಗಳು ಜಮಾಯಿಸಿದ್ದರು. ಎಲ್ಲರ ಮನದಲ್ಲೂ ಸಂಭ್ರಮ ಮನೆ ಮಾಡಿತ್ತು.

ಪಡುವಣದಲ್ಲಿ ಸೂರ್ಯ ಮೆಲ್ಲಗೆ ಮರೆಯಾಗುತ್ತಿದ್ದ, ಆದರೆ ಇಲ್ಲಿ ವಾಹನದಿಂದ  ಅಭಿಮಾನಿಗಳ ಭರವಸೆಯ ರವಿ ಉದಯಿಸಿದ್ದ.. ಆಗ ಮೊಳಗಿದ್ದೇ ಆಗಸ ಮುಟ್ಟುವ ಜಯಘೋಷ..

ವಾಹನದಿಂದಿಳಿದವರೇ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಗೌರವ ಸ್ವೀಕರಿಸಿದ ಅವರು, ವೈದ್ಯರ ಸಲಹೆಯಂತೆ ನನಗೆ ಊರಿಗೆ ಮರಳಲು ಆಗಿರಲಿಲ್ಲ. ಎಂಎಲ್ಸಿ ಚುನಾವಣೆ ಬಂದಿದೆ.     ನನಗೆ ಅನಿವಾರ್ಯವಾಯಿತು. ಬಂದಿರುವೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಗೆ ಮಾತ್ರ ಒಂದೇ ಮತ ನೀಡಬೇಕು ಎಂದು  ನೆರೆದ ಕಾರ್ಯಕರ್ತರಲ್ಲಿ,  ಅರ್ಹ ಮತದಾರರಲ್ಲಿ ಮನವಿ ಮಾಡಿದರು.

ಎಂಎಲ್ಸಿ ಚುನಾವಣೆ ಮುಗಿಯುವವರೆಗೆ ಊರಲ್ಲಿರುವೆ (ನೇಗಿನಹಾಳ). ಬಂದು ಭೇಟಿಯಾಗಬಹುದು. ನೀವು ಇಟ್ಟಿರುವ ಅಭಿಮಾನಕ್ಕೆ    ನಾನು ಚಿರಋಣಿಯಾಗಿರುವೆ  ಎಂದೂ ಭಾವುಕರಾಗಿ ನುಡಿದರು.

ಕಾಂಗ್ರೆಸ್ ಮುಖಂಡರಾದ ಶಂಕರ ಹೊಳಿ, ನಿಂಗಪ್ಪ ತಡಕೋಡ, ಹಬೀಬ ಶಿಲೇದಾರ, ಕುಲವಳ್ಳಿ ಗ್ರಾಪಂ ಅಧ್ಯಕ್ಷ ಬಿಷ್ಠಪ್ಪ ಶಿಂಧೆ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರಾಧಾಶ್ಯಾಮ್ ಕಾದ್ರೊಳ್ಳಿ, ಚಿಂತಣ್ಣ ಮರಡಿ, ಪುಂಡಲೀಕ ನೀರಲಕಟ್ಟಿ, ಬಾಬು ವಳಸಂಗ, ಮಹೇಶ ಶೆಟ್ಟರ, ಜಗದೀಶ ಘಟ್ನಟ್ಟಿ, ಶಿವನಗೌಡ ಪಾಟೀಲ, ಸಿದ್ರಾಮ ಅಪ್ಪೋಜಿ, ಸಂಜೀವ   ಲೋಕಾಪುರ, ಕುಮಾರ ಬಿಕ್ಕಣ್ಣವರ, ಮಹಾಂತೇಶ ಕಂಬಾರ, ಬಾಳಾಸಾಹೇಬ ದೇಸಾಯಿ, ಮಹಾದೇವ ಹಿತ್ತಲಮನಿ ಆಂಜನೇಯ ಪೂಜೇರ, ಮಡಿವಾಳೆಪ್ಪ ಕೋಟಗಿ,  ಸುನೀಲ ಬಜೆಣ್ಣವರ ಸೇರಿ ನೂರಾರು ಕಾರ್ಯಕರ್ತರು ಹಾಜರಿದ್ದರು.

0/Post a Comment/Comments