ರಾಯಣ್ಣ ಯುವ ಸಂಘಟನೆಯಿಂದ ರಾಜ್ಯೋತ್ಸವ - Kittur


 ರಾಯಣ್ಣ ಯುವ ಸಂಘಟನೆಯಿಂದ ರಾಜ್ಯೋತ್ಸವ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ವತಿಯಿಂದ ಸೋಮವಾರ 66 ನೇ ಕರ್ನಾಟಕ ರಾಜ್ಯೋತ್ಸವನ್ನು ಇಲ್ಲಿಯ ಚನ್ನಮ್ಮ    ವರ್ತುಲದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಯುವಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸÀಣ್ಣವರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಲ್ಲಿಸಿದರು. 

ಅನಂತರ ಸಂಘಟನೆ ಸದಸ್ಯ ವೈ. ಎಂ. ತಳವಾರ ಮಾತನಾಡಿ, ಅದ್ಧೂರಿ ಆಚರಣೆ ಮಾಡುವ ವಿಚಾರ  ಸಂಘದ ಸದಸ್ಯರಲ್ಲಿತ್ತು. ಆದರೆ ಈಚೆಗೆ ಖ್ಯಾತ ನಟ ಪುನೀತ್  ರಾಜಕುಮಾರ್ ನಿಧನರಾಗಿದ್ದರಿಂದ  ಸರಳವಾಗಿ ಆದರಿಸುವ    ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿದರು. 
ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಗಿ, ಸದಸ್ಯರಾದ ಯಲ್ಲಪ್ಪ ವರಗನ್ನವರ, ವಿಠ್ಠಲ ಧರೆಣ್ಣವರ, ಸುರೇಶ ಹಡಪದ, ವಿಜಯ ಘಾಟಿನ, ಪ್ರದೀಪ ಭಂಡಾರಿ, ಅಜ್ಜಯ್ಯ ಹಿರೇಮಠ, ಈರಣ್ಣ ಬರ್ಲಿನ್, ಸಂಗಯ್ಯ ಹಿರೇಮಠ, ಗಿರೀಶ ಹಿರೇಮಠ, ಮಹೇಶ ಭಂಡಾರಿ, ಸಂತೋಷ ಗಣಾಚಾರಿ, ಇಮ್ತಿಯಾಜ್, ಇರ್ಫಾನ್‍ಖಾನ್, ಸಾಗರ ಬಾಂಡಕರ, ಅಟೋ ಚಾಲಕರು ಇದ್ದರು.