ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಶತಮಾನದ ಇತಿಹಾಸವಿರುವ ಕನ್ನಡ ನಾಡಿನ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ನಿವೃತ್ತ ವ್ಯಕ್ತಿಗಳ ತಾಣವಾಗಿದೆ. ಈ ಹಣೆಪಟ್ಟಿ ಬದಲಿಸಬೇಕಾಗಿದೆ ಎಂದು ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ ಮುಲಾಲಿ ಅಭಿಪ್ರಾಯಪಟ್ಟರು.
ತಾಲೂಕಿನ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಯುವಕರು ಈ ಸ್ಥಾನಕ್ಕೆ ಬರಬೇಕಿದೆ ಎಂಬ ಇಂಗಿತ ವ್ಯಕ್ತಪಡಿಸಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ರೂ. 70 ಸಾವಿರ ತಿಂಗಳ ಸಂಬಳವಿದೆ. ವಾಹನ ಮತ್ತಿತರ ಸೌಲಭ್ಯಗಳಿವೆ. ಆಯ್ಕೆಯಾದರೆ ಏನೊಂದು ಸೌಲಭ್ಯ ಪಡೆಯದೆ ಉಚಿತ ಸೇವೆ ಸಲ್ಲಿಸುವುದಾಗಿ ತೀರ್ಮಾನಿಸಿದ್ದೇನೆ ಎಂದು ಅವರು ಘೋಷಿಸಿದರು.
ಪರಿಷತ್‍ನಲ್ಲಿ ಯುವ ಘಟಕ, ವಕೀಲರ ಘಟಕ, ವೈದ್ಯರ ಘಟಕ, ಮಹಿಳಾ ಘಟಕ, ರೈತ ಘಟಕ ತೆರೆಯುವ ಅಗÀತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಬೆಳಗಾವಿಯಲ್ಲಿ 1 ಲಕ್ಷ ಕನ್ನಡಿಗರ ಸೇರಿಸಿ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಪ್ರಕಟಿಸಿದರು.
107 ವರ್ಷ ಇತಿಹಾಸವಿರುವ ಪರಿಷತ್‍ಗೆ 80 ವರ್ಷ ದಕ್ಷಿಣ ಕರ್ನಾಟಕದವರೆ ಅಧ್ಯಕ್ಷರಾಗಿದ್ದಾರೆ. ಉತ್ತರ ಕರ್ನಾಟಕದವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಈ ಸಲ ಅವಕಾಶ ನೀಡಿದರೆ ಗ್ರಾಮಾಂತರ ಪ್ರದೇಶಕ್ಕೂ ಪರಿಷತ್ ಚಟುವಟಿಕೆ ವಿಸ್ತರಿಸುವುದಾಗಿ ತಿಳಿಸಿದರು.
ಡಿ. ಆರ್. ಪಾಟೀಲ, ಬಸವರಾಜ ಚಿನಗುಡಿ ಉಪಸ್ಥಿತರಿದ್ದರು.
‘ನಿಯಮ ಮೀರಿ ಮೆಟಗುಡ್ಡ ಸ್ಪರ್ಧೆ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಘಟಕಕ್ಕೆ ಮರು ಆಯ್ಕೆ ಬಯಸಿರುವÀ ಮಂಗಲಾ ಮೆಟಗುಡ್ಡ ಸ್ಪರ್ಧೆ ನಿಯಮ ಬಾಹೀರವಾಗಿದೆ ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಾಜಶೇಖರ ಮುಲಾಲಿ ಆರೋಪಿಸಿದರು.
ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಸಾಪ ಬೈಲಾಕ್ಕೆ ಇದು ವಿರೋಧವಾಗಿದೆ ಎಂದು ತಿಳಿಸಿದರು.
ಒಮ್ಮೆ ಚುನಾವಣೆಗೆ ನಿಂತವರು ಮತ್ತೊಮ್ಮೆ ನಿಲ್ಲಬಾರದು ಎಂದು ನಿಯಮದಲ್ಲಿದೆ ಎಂದೂ ಸ್ಪಷ್ಟನೆ ನೀಡಿದರು.
ಸಾಹಿತ್ಯ ಪರಿಷತ್‍ಗೆ ಸಂಬಂಧಿಸಿದಂತೆ ಜಾತಿ, ಧರ್ಮ ಬರಬಾರದು. ಆದರೆ ಬಂದು ಬಿಟ್ಟಿದೆ ಎಂದು ಕೆಲ ಸ್ವಾಮೀಜಿಗಳ ಕಸಾಪ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಅವರು ಪರೋಕ್ಷವಾಗಿ ಖಂಡಿಸಿದರು.
Post a Comment