ತುರಮರಿ : 25 ನೇ ವರ್ಷದ ಭಾಗವತ್ ಪುರಾಣ ಸಪ್ತಾಹ


 
25 ನೇ ವರ್ಷದ ಭಾಗವತ್ ಪುರಾಣ ಸಪ್ತಾಹ

ಪ್ರೆಸ್‍ಕ್ಲಬ್ ವಾರ್ತೆ

ತುರಮರಿ: ಇಲ್ಲಿಯ ಸುಕ್ಷೇತ್ರ ಮಡಿವಾಳೇಶ್ವರ ಮಠದಲ್ಲಿ 25ನೇ ವರ್ಷದ ಭಾಗವತ್ ಪುರಾಣ ಸಪ್ತಾಹ ಹಾಗೂ ಬೆಳ್ಳಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ಸಾನಿಧ್ಯ ವಹಿಸಿದ್ದ ನಯಾನಗರ ಸಿದ್ಧಕ್ಷೇತ್ರದ ತಪೋನಿಷ್ಠ ಅಭಿನವ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಭಾಗವತ ಚಿಂತನೆ ನಡೆಯುವ ಸ್ಥಳದಲ್ಲಿ ಭಗವಂತನು ಬಂದಿರುತ್ತಾನೆ ಎಂಬ ಪ್ರತೀತಿಯಿದೆ. ಹೀಗಾಗಿ ಇಲ್ಲಿ ಹೇಳುವವರು  ಮತ್ತು ಕೇಳುವವರು ದೇವಸ್ವರೂಪಿಗಳಾಗಿದ್ದಾರೆ ಎಂದರು. 

ಚಿಕ್ಕಮುನವಳ್ಳಿಯ ಆರೂಢಮಠದ ಶಿವಪುತ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಹೊಳಿ, ಕಲಾವಿದ ಸಿ.ಕೆ. ಮೆಕ್ಕೇದ, ವಕೀಲರಾದ ಸಂಗನಗೌಡ ಪಾಟೀಲ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸಾದ ಸೇವೆ ಮಾಡಿದ ಶಮೀರಅಮ್ಮದ ನದಾಫ ಹಾಗೂ ಪತ್ರಕರ್ತ ರುದ್ರಪ್ಪ ಹುಬ್ಬಳ್ಳಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಗ್ರಾಮಸ್ಥರು ಸುತ್ತಮುತ್ತಲಿನ ಜನರು ಪಾಲ್ಗೊಂಡಿದ್ದರು.

0/Post a Comment/Comments