ಕಿತ್ತೂರು ಉತ್ಸವ ‘ಬೆಳ್ಳಿಹಬ್ಬ’ಕ್ಕೆ ಸರ್ಕಾರ ನಿರಾಸಕ್ತಿ - kittur

 ಡಾ. ಕೋರೆ ಸೌಹಾರ್ದ ಸಹಕಾರಿಯ 46 ನೇ ಶಾಖೆ ಉದ್ಘಾಟನೆ - click...

ಕಿತ್ತೂರು ಉತ್ಸವ ಆಚರಣೆಗೆ ‘ಬೆಳ್ಳಿಹಬ್ಬ’ದ ಸಂಭ್ರಮ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
ಬ್ರಿಟಿಷರೊಂದಿಗೆ ನಡೆದ ಪ್ರಥಮ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಪ್ರತಿ ವರ್ಷ ಆಚರಿಸಲ್ಪಡುವ ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ಸಾಹಸ, ತ್ಯಾಗ ಮತ್ತು ಬಲಿದಾನ ಸ್ಮರಣೆಯ ‘ಕಿತ್ತೂರು ಚನ್ನಮ್ಮನ ಉತ್ಸವ’ಕ್ಕೆ ಸರ್ಕಾರ ಹಾಗೂ ಪ್ರಾಧಿಕಾರ ನಿರ್ಲಕ್ಷ್ಯ ತೋರಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಉತ್ಸವ ಆಚರಣೆಗೆ ಕೇವಲ 20 ದಿನಗಳು ಮಾತ್ರ ಬಾಕಿಯಿವೆ. ಇನ್ನೂವರೆಗೆ ಒಂದು ಸಭೆಯನ್ನೂ ಆಯೋಜಿಸಿಲ್ಲ. ರಾಣಿ ಚನ್ನಮ್ಮನ ಬಗ್ಗೆ ಈ ರೀತಿಯ ಧೋರಣೆ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1997 ರಲ್ಲಿ ಜೆ. ಎಚ್. ಪಟೇಲ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸರ್ಕಾರದಿಂದ ಅಧಿಕೃತವಾಗಿ ಪ್ರತಿವರ್ಷ ಕಿತ್ತೂರು ಉತ್ಸವ ಆಚರಣೆ ಪ್ರಾರಂಭಿಸಲಾಗಿತ್ತು. ಐತಿಹಾಸಿಕ ಉತ್ಸವ ಆಚರಣೆಗೆ ಈಗ ಬೆಳ್ಳಿಹಬ್ಬದ ಸಂಭ್ರಮ. 25ನೇ ವರ್ಷಾಚರಣೆಯನ್ನು ಒಂದು ಪ್ರಮುಖ ಕಾಲಘಟ್ಟವಾಗಿ ಸರ್ಕಾರ ನೋಡಬೇಕಿತ್ತು. ಆದರೆ ಈ ಬಗ್ಗೆ ಒಂದು ಚಿಕ್ಕ ಸಭೆಯನ್ನೂ ಇಲ್ಲಿಯವರೆಗೆ ನಡೆಸಿಲ್ಲ. ಈ ತಾತ್ಸಾರ ಭಾವವೇಕೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.