ಮಳೆಯಿಂದಾಗಿ ಕ್ರಿಕೆಟ್ ಟೂರ್ನಿ ಮುಂದೂಡಿಕೆ - kittur

ಕಿತ್ತೂರು: ಕ್ರಿಕೆಟ್ ಟೂರ್ನಿಗೆ ಚಾಲನೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಇಲ್ಲಿಯ ಕೆಎನ್‍ವಿವಿ ಸಂಘದ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಯ ನೌಕರರ ತಂಡಗಳ ಕ್ರಿಕೆಟ್ ಟೂರ್ನಿಗೆ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಶನಿವಾರ ಚಾಲನೆ ನೀಡಿದರು.
ವಿವಿಧ ಇಲಾಖೆ ನೌಕರರ 4 ಹಾಗೂ ಸ್ಥಳೀಯ ನೌಕರರೇತರ 4 ತಂಡಗಳು ಟೂರ್ನಿಯಲ್ಲಿ  ಭಾಗವಹಿಸಿವೆ. 5 ಓವರ್‍ಗಳ ಪಂದ್ಯ ಇದಾಗಿದೆ ಎಂದು ಸಂಘಟಕರು ತಿಳಿಸಿದರು.
ನೌಕರರ ತಂಡಗಳಲ್ಲಿ ಕಂದಾಯ, ಪಟ್ಟಣ ಪಂಚಾಯ್ತಿ, ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ನೌಕರರು ಭಾಗವಹಿಸಿದ್ದಾರೆ. ನೌಕರರೇತರರಲ್ಲಿ ಆರ್‍ಸಿಬಿ, ರಾಣಿ ಚನ್ನಮ್ಮ,  ಆಕಾಶ್  ಹಾಗೂ ಖೋದಾನಪುರ ತಂಡಗಳು ಇವೆ.
ಮಳೆಯಿಂದ ರದ್ದು


ಸಂಜೆ ಪಂದ್ಯಾವಳಿ ಮುಗಿಯಬೇಕಾಗಿತ್ತು. ಆದರೆ  ಪಟ್ಟಣದಲ್ಲಿ  ಸುರಿದ ಮಳೆಯಿಂದಾಗಿ  ಪಂದ್ಯಾವಳಿಯು ಮುಂದೂಡಲ್ಪಟ್ಟಿತು. ಅ. 3 ರಂದು ಬೆಳಿಗ್ಗೆ 11ಕ್ಕೆ     ಪಂದ್ಯಗಳು ಮುಂದುವರೆಯಲಿವೆ. 8 ತಂಡಗಳಲ್ಲಿ ಅ. 2 ರಂದು ನಾಲ್ಕು ತಂಡಗಳು ಮಾತ್ರ ಆಟವಾಡಿದವು. ಇನ್ನು ನಾಲ್ಕು ತಂಡಗಳ ಆಟ ಬಾಕಿಯಿದೆ.
ಚಾಂಪಿಯನ್ ತಂಡಕ್ಕೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಲಾಗುವುದು ಎಂದು ಸಂಘಟಕರು ಘೋಷಿಸಿದ್ದಾರೆ. .