ದೊಡವಾಡ: ಬಿತ್ತನೆ ಬೀಜ ವಿತರಣೆ - click...
ತಿಗಡೊಳ್ಳಿ: ಉಚಿತ ಸ್ಕೂಲ್ ಬ್ಯಾಗ್, ಬುಕ್ ವಿತರಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾಲೂಕಿನ ತಿಗಡೊಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ತಿಗಡೊಳ್ಳಿ ಹಾಗೂ ತೇಗೂರ ಗ್ರಾಮದ 5 ರಿಂದ 7 ನೇ ತರಗತಿಯ 47 ಎಸ್‍ಸಿ ಮತ್ತು ಎಸ್‍ಟಿ ವಿದ್ಯಾರ್ಥಿಗಳಿಗೆ ಶುಕ್ರವಾರ ಉಚಿತ ಸ್ಕೂಲ್ ಬ್ಯಾಗ್, ಜಾಮೆಟ್ರಿ ಬಾಕ್ಸ್ ಹಾಗೂ ಬುಕ್ ವಿತರಿಸಲಾಯಿತು.
ಅನಂತರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಕಳಸಣ್ಣವರ ಮಾತನಾಡಿ, ಮಕ್ಕಳು ದಿನ ನಿತ್ಯ ಗುರುಗಳು ಹೇಳಿದ ಪಾಠವನ್ನು ಗಮನವಿಟ್ಟು ಕೇಳಿದಾಗ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನ ಪಡೆದು ಗ್ರಾಮಕ್ಕೆ ಒಳ್ಳೆಯ ಕೀರ್ತಿ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಉಪಾಧ್ಯಕ್ಷೆ ಸವಿತಾ ಗೋದಳ್ಳಿ, ಪಿಡಿಓ ನಾಗರತ್ನಾ, ಕಾರ್ಯದರ್ಶಿ ಈಶ್ವರ ಸರಪಳಿ, ಸದಸ್ಯರಾದ ಗೋಪಾಲ ಹುಕ್ಕೇರಿ, ಜಗದೀಶ ಗೋದಳ್ಳಿ, ಬಸವರಾಜ ಶಿರಗಾಪೂರ, ನಾಗೇಶ ಗೌಡರ, ಕರೆವ್ವಾ ನಾಯ್ಕರ, ಶೀಲಾವತಿ ದಳವಾಯಿ, ಶೈನಾಜಬಿ ದಾದೇಬಾಯಿ, ಬಸವ್ವ ಕೋಲಕಾರ ಸಿಬ್ಬಂದಿಗಳಾದ ರವಿ ಅಂಗಡಿ, ಅಸ್ಲಾಂ ಬೀಡಿ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
Post a Comment