ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ಬೇಡ - kittur

 ಕಿತ್ತೂರು ಉತ್ಸವ ‘ಬೆಳ್ಳಿಹಬ್ಬ’ಕ್ಕೆ ಸರ್ಕಾರ ನಿರಾಸಕ್ತಿ - click..

‘ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ಬೇಡ’

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
2006 ರಿಂದ ಈಚೆಗೆ ನೇಮಕಾತಿ ಹೊಂದಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ವ್ಯವಸ್ಥೆ   (ಎನ್‍ಪಿಎಸ್) ಅನ್ವಯಿಸಬಾರದು.   ಹಳೇ ವ್ಯವಸ್ಥೆಯನ್ನೇ ಜಾರಿ ಮಾಡಬೇಕು ಎಂದು  ಆಗ್ರಹಿಸಿ ನೌಕರರ ಸಂಘಟನೆ ಸದಸ್ಯರು ಅ. 2 ರಂದು ಇಲ್ಲಿಯ   ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎನ್‍ಪಿಎಸ್ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ. ಎಸ್. ಗುರುವೈನವರ ಮಾತನಾಡಿ, ಹೊಸ ವ್ಯವಸ್ಥೆ ನೌಕರರಿಗೆ ಮರಣ ಶಾಸನವಾಗಿದೆ. ಅದನ್ನು ರದ್ದುಗೊಳಿಸಿ ಹಳೇ   ವ್ಯವಸ್ಥೆಯನ್ನೇ ಮುಂದುವರೆಸಬೇಕು  ಎಂದು ಆಗ್ರಹಿಸಿದರು.
ರಾಜ್ಯ ಪರಿಷತ್ ಸದಸ್ಯರಾದ ರವೀಂದ್ರ ಜಾಧವ ಮಾತನಾಡಿ, ಹೊಸ ಪಿಂಚಣಿ ವ್ಯವಸ್ಥೆಯ ಕರಾಳ ಮುಖವನ್ನು ಬಿಚ್ಚಿಟ್ಟರು.
ಎನ್‍ಜಿಓ ತಾಲೂಕು ಘಟಕದ ಅಧ್ಯಕ್ಷ ಐ. ಜಿ. ಚನ್ನಣ್ಣವರ ಮಾತನಾಡಿ, ಕಿತ್ತೂರು ತಾಲೂಕಿನಲ್ಲಿ ಬರುವ 800 ಸರ್ಕಾರಿ ನೌಕರರಲ್ಲಿ  163 ಎನ್‍ಪಿಎಸ್  ನೌಕರರಿದ್ದಾರೆ. ಅವರಿಗೆಲ್ಲ   ಇದರಿಂದ ತೊಂದರೆಯಾಗಲಿದೆ ಎಂದರು. 


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಐ. ಬಿ. ಉಪರಿ, ಅವೈಜ್ಞಾನಿಕವಾಗಿರುವ ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದು ಬೇಡ ಎಂದರು. 
ಎನ್‍ಪಿಎಸ್ ಕಾರ್ಯದರ್ಶಿ ಸಿ. ಎಸ್. ಹಂಚಿನಮನಿ,  ಕಾರ್ಯದರ್ಶಿ ಗಜಾನನ ಸೊಗಲನ್ನವರ, ಶಿಕ್ಷಕರು ಇದ್ದರು.

0/Post a Comment/Comments