ಕಿತ್ತೂರು ಉತ್ಸವ ಸಭೆಯೊಳಗೆ ಸಲಹೆಗಳ ಸುರಿಮಳೆ - kittur


ರಾಜಕಾರಣಿಗಳು  ಇತರರಿಗೆ ಮಾದರಿಯಾಗಿರಬೇಕು: ಸಚಿವ ಕಾರಜೋಳ- ವಿಡಿಯೋ ನೋಡಿ...

ಅ. 23, 24 ರಂದು ಗತವೈಭವ ನೆನಪಿಸುವಂತೆ ಉತ್ಸವ - click..

ಹೊರಗೆ ಮಳೆ; ಒಳಗೆ ಸಲಹೆಗಳ ಸುರಿಮಳೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಬುಧವಾರ ಕಿತ್ತೂರು ಉತ್ಸವ ಪೂರ್ವಭಾವಿ ಸಭೆ ನಡೆದಾಗ ಹೊರಗೆ ವಿಪರೀತ ಮಳೆ ಸುರಿದರೆ, ಒಳಗೆ ಅನೇಕರು ಸಲಹೆಗಳ ಸುರಿಮಳೆಯನ್ನು ಸುರಿಸಿದರು.
ಒಬ್ಬೊಬ್ಬರು ವಿಭಿನ್ನವಾದ ಸಲಹೆಗಳನ್ನು ನೀಡಿ ಗಮನ ಸೆಳೆದರು. 
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸಣ್ಣವರ ಮಾತನಾಡಿ, 3 ದಿನ ಅದ್ಧೂರಿಯಾಗಿ ಉತ್ಸವ ಆಚರಿಸಬೇಕು ಎಂದು ಮನವಿ ಮಾಡಿದರು.
ಮಂಜುನಾಥ ದೊಡ್ಡಣ್ಣವರ ಮಾತನಾಡಿ, ಕಿತ್ತೂರು ಕೋಟೆಯ ಸುತ್ತ ಖಾಸಗಿ ಜಮೀನುಗಳಿವೆ. 100 ಮೀಟರ್ ನಿರ್ಬಂಧಿತ ಪ್ರದೇಶವಾದ್ದರಿಂದ  ಅಲ್ಲಿ ಏನೂ ಮಾಡಲಾಗುತ್ತಿಲ್ಲ. ಹೀಗಾಗಿ ಸರ್ಕಾರ ಅವುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ಪರಿಹಾರ ನೀಡಬೇಕು ಎಂದರು.
ಪತ್ರಕರ್ತ ಬಸವರಾಜ ಮಾತನಾಡಿ ದಕ್ಷಿಣ ಕರ್ನಾಟಕದಲ್ಲಿ ಮೈಸೂರು ದಸರಾ ಉತ್ಸವ ಇದ್ದರೆ, ಉತ್ತರ ಕರ್ನಾಟಕದಲ್ಲಿ ಕಿತ್ತೂರು ಉತ್ಸವವಾಗಿದೆ.  25 ನೇ ವರ್ಷದ ಉತ್ಸವವಾಗಿದ್ದರಿಂದ ವಿಜೃಂಭಣೆಯಿಂದ ನಡೆಸಬೇಕು ಎಂದು ಸಲಹೆ ಕೊಟ್ಟರು.
ರಮೇಶ ಉಗರಕೋಡ ಮಾತನಾಡಿ ಅವರೂ ಉಪಯುಕ್ತ ಸಲಹೆ ನೀಡಿದರು.
ಸಾರ್ವಜನಿಕರು ನೀಡಿರುವ ವಿವಿಧ ಸಲಹೆಗಳು ಹೀಗಿವೆ:
ಕಿತ್ತೂರು ಉತ್ಸವದಲ್ಲಿ ಕೃಷಿ ಮೇಳ ನಡೆಸಬೇಕು
ಬಸವರಾಜ ಹೈಬತ್ತಿ
ಕಿತ್ತೂರು ಪಟ್ಟಣ ಹಾಗೂ ಕೋಟೆಯನ್ನು ನಿತ್ಯ ಪ್ರವಾಸಿಗರು ಬರುವ ಹಾಗೆ ಅಭಿವೃದ್ಧಿ ಪಡಿಸಬೇಕು
 ಹನುಮಂತ ಲಂಗೋಟಿ
ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೂ ಕೇಂದ್ರ ಪ್ರವಾಸೋದ್ಯಮ ಸಚಿವರು ಕಿತ್ತೂರು ಉತ್ಸವಕ್ಕೆ ಒಮ್ಮೆಯೂ  ಬಂದಿಲ್ಲ. ಅವರನ್ನು ಆಮಂತ್ರಿಸಬೇಕು
ಸಂಜೀವ ಲೋಕಾಪುರ
ಕಿತ್ತೂರು ಉತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿಯನ್ನು ಗೌರವಿಸಬೇಕು
 ಡಾ. ಶ್ರೀಕಾಂತ ದಳವಾಯಿ
ಮಹಿಳಾ ಕಲಾವಿದರಿಗೂ ಉತ್ಸವದಲ್ಲಿ ಹೆಚ್ಚು ಅವಕಾಶ ಸಿಗಬೇಕು
 ಸರಸ್ವತಿ ಹೈಬತ್ತಿ
ಸಚಿವ ನಾರಾಯಣಸ್ವಾಮಿ ಅವರನ್ನು ಕಿತ್ತೂರು ಉತ್ಸವಕ್ಕೆ ಆಮಂತ್ರಿಸಬೇಕು
ಮಡಿವಾಳಪ್ಪ ವಕ್ಕುಂದ
ಉತ್ಸವ ಪ್ರಯುಕ್ತ ಹೊರಡಿಸಲಾಗುವ ವೀರಜ್ಯೋತಿಯು ಕರ್ನಾಟಕದಾದ್ಯಂತ ಸಂಚರಿಸಬೇಕು
ಚಂದ್ರಕಾಂತ ಹೈಬತ್ತಿ
ಕಿತ್ತೂರು ಮೇಲೆ ಹೆಚ್ಚು ಅಭಿಮಾನವಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಮಂತ್ರಿಸಿ ಉತ್ಸವ ಉದ್ಘಾಟನೆ ನೆರವೇರಿಸಬೇಕು
ಡಾ. ಬಸವರಾಜ ಪರವಣ್ಣವರ
ಉತ್ಸವ ದಿನದಂದು ಎಂ. ಕೆ. ಹುಬ್ಬಳ್ಳಿಯ ಕಲ್ಮೇಶ್ವರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ನಾಡಗೀತೆ ಹಾಗೂ ರೈತಗೀತೆ ಹಾಡಿಸಬೇಕು
 ಬಸವರಾಜ ಡೂಗನವರ



0/Post a Comment/Comments