ಹೆಬ್ಬಾಳಕರ ಬಗ್ಗೆ ಟೀಕೆ: ರೋಹಿಣಿ ಪಾಟೀಲ ತಿರುಗೇಟು - kittur


 ಮಹಿಳೆ ಬಗೆಗಿನ ಬಿಜೆಪಿ ಸಂಸ್ಕøತಿ ಹೀಗೇನಾ? 

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
‘ಹಿಂದೂ ಸಂಸ್ಕøತಿ ಹಾಗೂ ಮಹಿಳೆಯರ ಬಗ್ಗೆ ಮಾತನಾಡುತ್ತೀರಿ. ನಿಮ್ಮ ಸಂಸ್ಕøತಿ ಇದೇನಾ?’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಹಾಗೂ ಪಂಚಮಸಾಲಿ ಸಮಾಜದ ನಾಯಕಿ ರೋಹಿಣಿ ಪಾಟೀಲ ಖಾರವಾಗಿ ಕೇಳಿದರು.
ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿ, ‘ಲಕ್ಷ್ಮಿ ಹೆಬ್ಬಾಳಕರ ಪಂಚಮಸಾಲಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಸಮಾಜದ ಎಲ್ಲ ಸ್ತರದ ಸಮುದಾಯದ ಜನರ ಬಗ್ಗೆ ಗೌರವ ಹೊಂದಿದ್ದಾರೆ. 50 ಸಾವಿರಕ್ಕೂ ಅಧಿಕ ಮತಗಳಿಂದ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ’ ಎಂದು ಹೇಳಿದರು.
‘ಸ್ವಾಭಿಮಾನಕ್ಕೆ ಹೆಸರಾದ ಪಂಚಮಸಾಲಿ ನಾಯಕಿಯ ಬಗ್ಗೆ ಸಂಜಯ ಪಾಟೀಲ ಬಳಸಿದ ಭಾಷೆಯಿಂದ ಸಮಾಜದವರಿಗೆ ಅತ್ಯಂತ ನೋವಾಗಿದೆ. ಆಡಿದ ತಪ್ಪಿಗೆ ಮೊದಲು ಕ್ಷಮೆ ಕೇಳಬೇಕು. ಬಿಜೆಪಿ ಅಧ್ಯಕ್ಷರು ಇವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಮಾಜದ ತಾಲೂಕು ಘಟಕದ ಅಧ್ಯಕ್ಷ ಡಿ. ಆರ್. ಪಾಟೀಲ ಮಾತನಾಡಿ, ‘ಸಂಜಯ ಪಾಟೀಲ ಬಳಸಿದ ಭಾಷೆಯನ್ನು ಖಂಡಿಸುತ್ತೇವೆ. ಇಂಥ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು’ ಎಂದು ತಾಕೀತು ಮಾಡಿದರು.


ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮುದಕಪ್ಪ ಮರಡಿ, ಮುಖಂಡರಾದ ದೊಡಗೌಡ ಹುಚಗೌಡರ, ನಾಗಪ್ಪ ಕಳಸನ್ನವರ, ಪ್ರಕಾಶ ಕುಲಕರ್ಣಿ, ಚನಬಸಪ್ಪ ಕಳಸನ್ನವರ, ಅದೃಶ್ಯ ದಿಬ್ಬದ, ಶಿವನಗೌಡ ಪಾಟೀಲ, ರಮೇಶ ರಾಚನಾಯ್ಕರ, ಮಹಾದೇವಿ ಕೋಟಗಿ, ಕವಿತಾ ಬೆಳಗಾವಿ, ಭಾರತಿ ಕಲ್ಲೊಳ್ಳಿ ಪತ್ರಿಕಾಗೋಷ್ಟಿಯಲ್ಲಿದ್ದರು.

0/Post a Comment/Comments