ಕಿತ್ತೂರು ಉತ್ಸವ: ಪೂರ್ವಭಾವಿ ಸಭೆಗೆ ರಾಯಣ್ಣ ಯುವ ಸಂಘಟನೆ ಆಗ್ರಹ - kittur

ಶ್ರೀಮಂತರ ನಿಗೂಢ ನಿಧಿ ಹೂಡಿಕೆ  ಮಾಡಿದ್ದೆಲ್ಲಿ ? - click...

ಕಿತ್ತೂರು ಉತ್ಸವ: ಪೂರ್ವಭಾವಿ ಸಭೆಗೆ ರಾಯಣ್ಣ ಯುವವೇದಿಕೆ ಆಗ್ರಹ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು:
ಇತಿಹಾಸ ಪ್ರಸಿದ್ಧ ರಾಣಿ ಚನ್ನಮ್ಮನ ಕಿತ್ತೂರು ಉತ್ಸವ ಆಚರಣೆಯ ಸಿದ್ಧತಾ ಸಭೆ ಕರೆಯಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
ಇಲ್ಲಿಯ ತಹಶೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗೆ ಸೋಮವಾರ ಮನವಿ ಸಲ್ಲಿಸಿದ ನಂತರ ಯುವ ಸಂಘಟನೆ  ರಾಜ್ಯಾಧ್ಯಕ್ಷ ಮಹಾಂತೇಶ ಕರಬಸಣ್ಣವರ ಮಾತನಾಡಿ, ಅದ್ಧೂರಿಯಾಗಿ ಈ ಬಾರಿಯಾದರೂ ಉತ್ಸವ  ಆಚರಿಸಬೇಕು ಹಾಗೂ ಅದಕ್ಕಾಗಿ   ಸಿದ್ಧತೆ ಪ್ರಾರಂಭಿಸಬೇಕು ಎಂದು ಕೋರಿದರು.
ಕಿತ್ತೂರು ಉತ್ಸವ ಆಚರಣೆ ಪ್ರಾರಂಭಿಸಿ 24 ವರ್ಷಗಳು ಕಳೆದಿವೆ. ಈ ಬಾರಿ 25 ನೇ ವರ್ಷಾಚರಣೆಯಾಗಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಉತ್ಸವವು ನಾಡಿನ ಸಾರ್ವಜನಿಕರ   ಮನಸ್ಸಿನಲ್ಲಿ ಉಳಿಯುವಂತಹ   ಉತ್ಕøಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.


ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯಾದರ್ಶಿ ವಿನಾಯಕ ಗಾಣಗಿ,  ಸದಸ್ಯರಾದ  ವಿಶಾಲ ಕೋಟಗಿ, ಸೂರ್ಯಕಾಂತ ಕಿತ್ತೂರು, ಸುಭಾಸ ಹದ್ದನ್ನವರ, ಬಸವರಾಜ ಕೆಳಗಡೆ, ವಿಜಯಕುಮಾರ ಘಾಟಿನ್, ಫಕ್ಕೀರಪ್ಪ ಹಂಚಿನಮನಿ, ಉಮೇಶ ವರಗನ್ನವರ, ಕಲ್ಮೇಶ ಬೋಗೂರ, ಅಭಿಷೇಕ ವರಗನ್ನವರ, ಮಲ್ಲೇಶ ಹದ್ದನ್ನವರ, ಸತೀಶ ನಾಯ್ಕರ್ ಇದ್ದರು.

0/Post a Comment/Comments