‘ನನ್ನೀ ನಾಡು-ನನ್ನೀ ನುಡಿಯನು ಕಣ್ಣಿನಂತೆ ಕಾಪಾಡುವೆನು'
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಈಚೆಗೆ ನಡೆದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಸ್ವತಃ ಹಾಡಿ, ಮಕ್ಕಳಿಂದ ಹಾಡಿಸಿ ಜನಮನ ರಂಜಿಸಿದರು.
ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕಕ್ಕುಲತೆಯಿಂದ ಕಂಡು ಪರಿಹರಿಸುವ ಗುಣಸ್ವಭಾವದ ಜಿಲ್ಲಾಧಿಕಾರಿ ಅವರು ಕನ್ನಡ ನಾಡು, ನುಡಿ ಕಾಯುವ ಸೇನಾನಿ ಎಂಬುದನ್ನು ಗ್ರಾಮವಾಸ್ತವ್ಯದಲ್ಲಿ ತಮ್ಮ ಹಾಡಿನ ಮೂಲಕ ಸಾರಿದರು.
'ಕನ್ನಡವೆಂದರೆ ಕುಣಿಯುವೆನು, ನನ್ನೀ ನಾಡನು, ನನ್ನೀ ನುಡಿಯನು ಕಣ್ಣಿನಂತೆ ಕಾಪಾಡುವೆನು. ಧೈರ್ಯವ ಕೆಡಿಸುವ ಹೇಡಿಯನು, ನಂಬಿಗೆ ನಸಿಸುವ ಚಾಡಿಯನು' ಕೇಳುವುದಿಲ್ಲ ಎಂಬ ದಿಟ್ಟ ಉತ್ತರವನ್ನೂ ಆಗದವರಿಗೆ ಕೊಟ್ಟಂತೆ ಅವರ ಹಾಡು ವೇದಿಕೆಯಲ್ಲಿ ಧ್ವನಿಸಿದಂತಿತ್ತು.
ಶಾಲಾ ಮಕ್ಕಳಿಂದಲೂ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರೂ ಈ ‘ಸಾಂಸ್ಕøತಿಕ ಸಂಭ್ರಮ'ದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
Post a Comment