ಬನ್ನಿ ಹಬ್ಬದ ಸಡಗರದಲ್ಲಿದ್ದ ಊರಿಗೆ ಬಡಿದ ಬರಸಿಡಿಲು : ರಸ್ತೆ ಅಪಘಾತದಲ್ಲಿ ದೇವೇಂದ್ರ ಕೆಂಚಣ್ಣವರ ಸಾವು - kittur

ಜಿಲ್ಲಾಧಿಕಾರಿ ಹಿರೇಮಠ ಅವರಿಗೆ ವಿದ್ಯಾರ್ಥಿನಿ ಪ್ರಶ್ನೆ - click...

ರಸ್ತೆ ಅಪಘಾತದಲ್ಲಿ ದೇವೇಂದ್ರ ಕೆಂಚಣ್ಣವರ ಸಾವು

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ನವರಾತ್ರಿ ಕೊನೆಯ ದಿನವಾಗಿದ್ದ ಶುಕ್ರವಾರ ಪರಸ್ಪರ  ಬನ್ನಿ 

ಕೊಟ್ಟು, ತೆಗೆದುಕೊಳ್ಳುವ ಸಂಭ್ರಮದಲ್ಲಿ ಊರ ಜನರಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಇರಲಿಲ್ಲ.  ಬರಸಿಡಿಲಿನಂತೆ ಆಘಾತಕಾರಿ ಸುದ್ದಿಯೊಂದು ಬಂದು  ಗ್ರಾಮಕ್ಕೆ ಅಪ್ಪಳಿಸಿತ್ತು. ಇದರಿಂದ ಶೋಕದ ವಾತಾವರಣವೇ ಇಡೀ ಊರನ್ನು ಮುಚ್ಚಿ ಹಾಕಿತ್ತು.

ಅದು, ಯುವಕನೊಬ್ಬ ಬೈಕ್ ಅಪಘಾತದಲ್ಲಿ ಮಡಿದ ದುರಂತ ಸಾವಿನ ಸುದ್ದಿಯಾಗಿತ್ತು.

ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ   ಅರೆಕಾಲಿಕ ಸಿಬ್ಬಂದಿಯಾಗಿದ್ದ, ಸ್ನೇಹಜೀವಿ ತಿಗಡೊಳ್ಳಿ ಗ್ರಾಮದ ದೇವೇಂದ್ರ ಕುಬೇರಪ್ಪ ಕೆಂಚಣ್ಣವರ ರಸ್ತೆ ಅಪಘಾತದಲ್ಲಿ ಶುಕ್ರವಾರ ಸಂಜೆ ಸಾವನ್ನಪ್ಪಿದರು.

31 ವಯಸ್ಸಿನ ಅವರು ತಂದೆ, ತಾಯಿ, ಪತ್ನಿ ಹಾಗೂ 3 ತಿಂಗಳ ಪುತ್ರನನ್ನು ಬಿಟ್ಟು ಅಗಲಿದ್ದಾರೆ. 

ಕಿತ್ತೂರಿಂದ ಇಟಗಿ ಕ್ರಾಸ್ ಕಡೆಗೆ ಹೊರಟಿದ್ದ ಅವರ ಬೈಕ್ ಉಗರಕೋಡ ಬಳಿ ಸ್ಕಿಡ್ ಆಗಿ ಬಿತ್ತು. ತಲೆಗೆ ತೀವ್ರ ಏಟು ಬಿದ್ದಿದ್ದರಿಂದ ಸ್ಥಳದಲ್ಲೇ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹವನ್ನು ತಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶನಿವಾರ ಬೆಳಗಿನ ಮೂರು ಗಂಟೆಗೆ ಅವರ  ಅಂತ್ಯಕ್ರಿಯೆ ನೆರವೇರಿಸಲಾಯಿತು. 

ಸಂಬಂಧಿಕರು, ಸ್ನೇಹಿತರು, ಆಪ್ತರು, ಪರಿಚಿತರು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಸ್ನೇಹಿತರು, ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ಡಿಪಿ ಇಟ್ಟು ಅವರಿಗೆ ಶ್ರದ್ಧಾಂಜಲಿ   ಅರ್ಪಿಸಿದ ದೃಶ್ಯ ಮನಕರಗುವಂತಿತ್ತು.