ಸಂಸ್ಕಾರವಂತ ನಟ ಪುನೀತ್ ರಾಜಕುಮಾರ್ - click...
ರಾಯಣ್ಣ ಯುವ ಸಂಘಟನೆಯಿಂದ ಸಂತಾಪ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಠಾತ್ ನಿಧನಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಲಾಯಿತು.
ಇಲ್ಲಿಯ ಚನ್ನಮ್ಮ ವರ್ತುಲದಲ್ಲಿ ಶನಿವಾರ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಸಂಘಟನೆ ಅಧ್ಯಕ್ಷ ಮಹಾಂತೇಶ ಕರಬಸಣ್ಣವರ ಮಾತನಾಡಿ, ಕನ್ನಡ ಸಿನಿಮಾ ಲೋಕದ ಆಸ್ತಿಯಾಗಿದ್ದ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದಂತಾಗಿದೆ. ಇನ್ನೂ ಉಜ್ವಲ ಭವಿಷ್ಯ ಹೊಂದಿದ್ದ ಅವರಿಗೆ ವಿಧಿ ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ವಿಷಾದಿಸಿದರು.
ಅವರು ಮಾಡಿದ ಸಿನಿಮಾ ಅದ್ಭುತವಾಗಿದ್ದವು. ಅವುಗಳಲ್ಲಿ ಸಮಾಜಕ್ಕೆ ಸಂದೇಶ ಇರುತ್ತಿತ್ತು. ದೊಡ್ಡ ನಟರಾಗಿದ್ದರೂ ಗರ್ವ ಹತ್ತಿರ ಸುಳಿದಿರಲಿಲ್ಲ. ಸಮಾಜಮುಖಿ ಅವರ ಸೇವೆ ಮಾದರಿಯಾಗಿತ್ತು ಎಂದು ವಿವರಿಸಿದರು.
ಉಪಾಧ್ಯಕ್ಷ ಮಹೇಶ ಮಲಶೆಟ್ಟಿ, ಕಾರ್ಯದರ್ಶಿ ವಿನಾಯಕ ಗಾಣಗಿ, ಸದಸ್ಯರಾದ ಈರಪ್ಪ ಮಲಶೆಟ್ಟಿ, ಕಲ್ಮೇಶ ಬೋಗೂರ, ವಿಜಯ ಘಾಟಿನ, ಕಲ್ಮೇಶ ಮುತ್ನಾಳ, ಶಿವು ಹಿರೇಮಠ, ಗಣೇಶ ಹುರಕಡ್ಲಿ, ಅಕ್ಷಯ ಬೆಳ್ಳೂರಿಮಠ, ವೈ. ಎಂ. ತಳವಾರ, ಮಂಜುನಾಥ ಹಡಪದ, ಅಟೋ ಚಾಲಕರು ಹಾಗೂ ಅಪ್ಪು ಅಭಿಮಾನಿಗಳು ಇದ್ದರು.
Post a Comment