ಗಾಯಕ ವಿಜಯಪ್ರಕಾಶ್‍ಗೆ ಆರಾದ್ರಿಮಠ ಶಾಸ್ತ್ರಿ ಅವರಿಂದ ಸತ್ಕಾರ - Kittur


  ಸ್ತ್ರೀಶಕ್ತಿ ಸಂಘಟನೆಯಿಂದ ಗುಣಮಟ್ಟದ ವಸ್ತು ಉತ್ಪಾದನೆ : ಸಂಸದೆ ಮಂಗಲಾ ಅಂಗಡಿ - click...

ಗಾಯಕ ವಿಜಯಪ್ರಕಾಶ್‍ಗೆ ಆರಾದ್ರಿಮಠ ಶಾಸ್ತ್ರಿ ಸತ್ಕಾರ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ಎರಡನೇ ದಿನ ರಾತ್ರಿ ರಸಮಂಜರಿ  ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರನ್ನು ಬೈಲಹೊಂಗಲ ಆರಾದ್ರಿಮಠದ ವೇದಮೂರ್ತಿ ಮಹಾಂತಯ್ಯ ಶಾಸ್ತ್ರಿ ಅವರು ಸತ್ಕರಿಸಿದರು.

ದುರ್ಗಾಪರಮೇಶ್ವರಿ  ಮೂರ್ತಿ ಉಡುಗೊರೆಯಾಗಿ ನೀಡಿದ ಶಾಸ್ತ್ರಿ ಅವರು, ನಾಡಿನಲ್ಲಿ ತಮ್ಮ ಕೀರ್ತಿ ಇನ್ನೂ ಎತ್ತರಕ್ಕೆ ಬೆಳಗಲಿ ಎಂದು  ಆಶೀರ್ವದಿಸಿದರು.

ವಿಜಯ ಪ್ರಕಾಶ್ ಮಾತನಾಡಿ, ಪೂಜ್ಯರ ದರ್ಶನ ಭಾಗ್ಯ ಸಿಕ್ಕಿರುವುದು ನನ್ನ ಪೂರ್ವಜನ್ಮದ ಸುಕೃತ ಎಂದು ವಿನಮ್ರದಿಂದ ನುಡಿದರು. 

ಪತ್ರಕರ್ತ ರವಿ ಹುಲಕುಂದ, ಈರಣ್ಣ ಕಾಟೇಶನ್ನವರ, ಆನಂದ ತೋಟಗಿ, ಬಸವರಾಜ ರಟ್ಟಿ, ಪ್ರಶಾಂತ್ ಹಿರೇಮಠ ಹಾಗೂ ದುರ್ಗಾದೇವಿ ದೇವಸ್ಥಾನದ ಸಮಸ್ತ ಶಿಷ್ಯಬಳಗ ಈ ಸಂದರ್ಭದಲ್ಲಿ ಹಾಜರಿದ್ದರು.

0/Post a Comment/Comments