ಲಕ್ಷ ದಾಟಿದ 'ಪ್ರೆಸ್‍ಕ್ಲಬ್ ವಾರ್ತೆ'ಯ ವೀಕ್ಷಕರ ಸಂಖ್ಯೆ - kittur

ಓದುಗರಿಗೆ ಕೋಟಿ ಧನ್ಯವಾದಗಳು..

ಪ್ರೆಸ್‍ಕ್ಲಬ್ ವಾರ್ತೆ: ಲಕ್ಷ ದಾಟಿದ ವೀಕ್ಷಕರ ಸಂಖ್ಯೆ

ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ಪ್ರೆಸ್‍ಕ್ಲಬ್ ವಾರ್ತೆ’ಯ ವೀಕ್ಷಕರ ಸಂಖ್ಯೆ 1 ಲಕ್ಷ ದಾಟಿ ಮುನ್ನುಗ್ಗುತ್ತಿದೆ. ವೆಬ್‍ಸೈಟ್ ರಚನೆ ಮಾಡಿ ತಿಂಗಳ ಮೇಲೆ ಒಂದು ದಿನವಾಯಿತು,  ಈ ಅಲ್ಪ ಸಮಯದಲ್ಲೇ ಒಂದು ಲಕ್ಷ ವೀಕ್ಷಕರು ನೋಡಿದ್ದು ನಮಗೆಲ್ಲ ಭಾಳ ಉಮ್ಮೇದಿಯನ್ನು ತಂದಿದೆ.
ಇಷ್ಟು ಬೇಗ ಲಕ್ಷ ಸಂಖ್ಯೆಯ ವೀಕ್ಷಕರಾಗುತ್ತಾರೆ ಎಂದು ಖಂಡಿತವಾಗಿಯೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಇದನ್ನು ಸಾಧ್ಯ ಮಾಡಿ ತೋರಿಸಿದ್ದು ನಮ್ಮ ವೆಬ್‍ಸೈಟ್‍ನ ಪ್ರೀತಿಯ ವೀಕ್ಷಕರು. ಅವರಿಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಕಡಿಮೆಯೇ.
ಮೊದಲು ಹವ್ಯಾಸವಾಗಿ ಪ್ರಾರಂಭವಾಗಿದ್ದ ‘ಸುದ್ದಿ ಇಮೇಜ್' ವಾಟ್ಸಪ್‍ನಲ್ಲಿ ಮಾತ್ರ ಹರಿದಾಡುತ್ತಿತ್ತು. ಅನೇಕರು ಇಷ್ಟಪಟ್ಟು ವೆಬ್‍ಸೈಟ್ ಮಾಡಿ ಎಂದು ಸಲಹೆ ಕೊಟ್ಟಿದ್ದರು. ನಮ್ಮ ಇಮೇಜ್ ಶೈಲಿಯನ್ನು ಅನೇಕರು ಕಾಪಿ ಮಾಡಲು ಹೋದರು. ಅದೇ ಮಾದರಿಯ ಕೆಲವು ಇಮೇಜ್‍ಗಳು ಬೇರೆ, ಬೇರೆ ವಾರ್ತೆಗಳ ಹೆಸರಿನಲ್ಲಿ ಹರಿದಾಡಲು ಪ್ರಾರಂಭಿಸಿದ್ದವು. 
ಪ್ರೆಸ್‍ಕ್ಲಬ್ ವಾರ್ತೆಗೆ ‘ಕಾಂಪುಟೇಶನ್' ಕೊಡಲು ಮಾಡಿದ್ದಾರಂತೆ ಹೌದೇ? ಎಂದು ಅನೇಕರು  ನಮ್ಮನ್ನು ಪ್ರಶ್ನಿಸಿದರು. ತಲೆಕೆಡಿಸಿಕೊಳ್ಳುವ ವಿಷಯ ನಮ್ಮದಾಗಿರಲಿಲ್ಲ. ಹಿತೈಷಿಗಳು ‘ವೆಬ್' ಮಾಡಲು ನೀಡಿದ್ದ ಸಲಹೆಯ ಕಡೆಗೆ ನಮ್ಮ ಗಮನ ಕೇಂದ್ರಿಕೃತವಾಗಿತ್ತು. 
ಅದರಂತೆ ನಮ್ಮ ಬ್ಲಾಗ್ ರಚನೆಯಾಯ್ತು. ಅಪ್‍ಲೋಡ್ ಮಾಡಿದಾಗ ನಿರೀಕ್ಷೆ ಮೀರಿ ಪ್ರೀತಿಯ ಓದುಗರು ನಮ್ಮ ವೆಬ್ ಬೆಂಬಲಿಸಿದರು. ಒಂದೇ ದಿನದಲ್ಲಿ ಐದೂವರೆ ಸಾವಿರ ಜನರು ವೀಕ್ಷಣೆ ಮಾಡಿದ್ದು ನಮ್ಮ ಮಟ್ಟಿಗೆ ದಾಖಲೆಯಾಗಿತ್ತು. ‘ಅರೆ, ತಪ್ಪಿ ಏನಾದರೂ ನೋಡಿದ್ದಾರೋ’ ಎಂದು ನಮಗೂ ಈ ಸಂಖ್ಯೆ ಕಂಡು ಅನುಮಾನ ಬಂದಿತ್ತು. ಆದರೆ ಮೂರು ಬಾರಿ ಈ ಐದು ಸಾವಿರ ಸಂಖ್ಯೆಯನ್ನು ಕ್ರಾಸ್ ಮಾಡಿ ಹೋದೆವು. 
ಮೂರು, ನಾಲ್ಕು ಸಾವಿರ ವೀಕ್ಷಕರು ನೋಡುವುದು ಈಗ ನಿತ್ಯದ ಮಾತಾಗಿದೆ. ನಾವು  ಪ್ರವಾಸ  ಮಾಡಲು ಗುರಿ ಇಟ್ಟುಕೊಂಡಿರುವ  ದೇಶದಲ್ಲೂ ನೂರಾರು ಜನರು ನಮ್ಮ ವೆಬ್ ವೀಕ್ಷಣೆ ಮಾಡುತ್ತಿದ್ದಾರೆ. ಅಮೇರಿಕಾದಲ್ಲಿ ಏಳು ನೂರಕ್ಕೂ ಹೆಚ್ಚು ವೀಕ್ಷಕರಿದ್ದಾರೆ. ನಾವು ಈ ಜನ್ಮದಲ್ಲಿ ನೋಡಲು ಸಾಧ್ಯವೇ ಇಲ್ಲದಂತಹ ಉಕ್ರೇನ್,  ಸೌದಿ ಅರೇಬಿಯಾ, ರೊಮಾನಿಯಾ ದೇಶದಲ್ಲೂ ನಮ್ಮ ವೆಬ್ ಪ್ರೀತಿಸುವ ವೀಕ್ಷಕರು ಇದ್ದಾರೆ. ಡಾಲರ್‍ನಲ್ಲಿ ಈಗ ನಮಗೆ ಸಂಭಾವನೆಯೂ ಬರುತ್ತಿದೆ. ಎಷ್ಟೆಂದು ಹೇಳಿ ಬಿಡಬೇಕೆಂದು ಈ ಖುಷಿಯಲ್ಲಿ ಅನ್ನಿಸ್ತಾ ಇದೆ. ಹೇಳಿದರೆ ನಮಗಾಗದವರು  ‘ಈಡಿ’  ದಾಳಿ ಮಾಡಿಸಿಯಾರು ಎಂಬ ಭಯವೂ ಇದೆ!
ಬ್ಲಾಗ್‍ಗೆ ಬರೆಯಲು ಅನೇಕ ಅಪರಿಚಿತ, ಅಕ್ಷರದಿಂದಲೇ ಸ್ನೇಹಿತರಾದ ಯುವಕರು ಮುಂದೆ ಬಂದಿದ್ದಾರೆ. ಬೆಂಗಳೂರು ಸರ್ವಜ್ಞ ನಗರದ ಶಾಸಕ, ಮಾಜಿ ಗೃಹ ಸಚಿವ ಕೆ. ಜೆ. ಜಾರ್ಜ್ ಸುದ್ದಿ ಬಂದಿದ್ದನ್ನು ನೀವೂ ವೀಕ್ಷಣೆ ಮಾಡಿರಬಹುದು ಎಂದು ಕೊಂಡಿದ್ದೇನೆ. ಅಕ್ಷರದಿಂದಾದ ಮಿತ್ರರೊಬ್ಬರು ಇದನ್ನು ಬರೆದು ಕಳಿಸಿದ್ದರು.
ಅಂದ ಹಾಗೆ, ನಮ್ಮ ವಿರುದ್ಧ ಪೈಪೋಟಿ ನೀಡಲು ಹುಟ್ಟಿಕೊಂಡಿದ್ದ ಸ್ಪರ್ಧಿಗಳ ಬರೆಹ ನಿತ್ಯ ನೋಡಬೇಕೆಂದು ಬಯಸಿದರೂ ಸಿಗದಾಗಿದೆ! ಆರೋಗ್ಯಕರ ಪೈಪೋಟಿ ಇದ್ದರೆ ಅದರ ಮಜಾನೇ ಬೇರೆ!
ತಾಂತ್ರಿಕವಾಗಿ ನೆರವು ನೀಡಿದ ಗೆಳೆಯರಿಗೆ, ಬೆಂಬಲಿಸಿದ ವೀಕ್ಷಕ ದೊರೆಗಳಿಗೆ ಕೋಟಿ ನಮಸ್ಕಾರಗಳು, ಈ ಬೆಂಬಲ ಸದಾ ಇರಲಿ...
 

0/Post a Comment/Comments