ಕುಲವಳ್ಳಿ ವ್ಯಕ್ತಿ ಕೊಲೆ: ಆರೋಪಿಗಳ ಬಂಧನ - kittur

ಕುಲವಳ್ಳಿಯಲ್ಲಿ ಕೊಲೆ : ಆರೋಪಿಗಳು ಪರಾರಿ - click...

‘ಕುಲವಳ್ಳಿ’ ಕೊಲೆ: ‘ಹಳೇ ವೈಷಮ್ಯವೇ ಕಾರಣ’
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಅ. 16 ರಂದು ಕುಲವಳ್ಳಿ  ಗ್ರಾಮದಲ್ಲಿ ನಡೆದ ವ್ಯಕ್ತಿಯೊಬ್ಬನ ಕೊಲೆಗೆ ಹಳೇ ವೈಷಮ್ಯವೇ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದೇ ಊರಿನವರಾದ ಮಡಿವಾಳಪ್ಪ ಶಿವಬಸಪ್ಪ ಬಸರಗಿ (24) ಹಾಗೂ ದಾಕುಲು ದೊಂಡು ಲಾಂಬೋರ  (40) ಎಂಬಿಬ್ಬರು  ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
ತಲೆಮರೆಸಿಕೊಂಡಿದ್ದ ಆರೋಪಿಗಳು ಕತ್ರಿದಡ್ಡಿ ಬಳಿಯ ನಿಂಗಾಪುರ ಕ್ರಾಸ್‍ನಲ್ಲಿ ಓಡಾಡುತ್ತಿದ್ದಾಗ  ಅವರನ್ನು ಬಂಧಿಸಲಾಯಿತು ಎಂದು ವಿವರ ನೀಡಿದ್ದಾರೆ.
ಕೊಲೆಯಾದ ಫಕ್ಕೀರಪ್ಪ ಬಸಪ್ಪ ಉಪ್ಪಾರ ಕುಡಿದ ಅಮಲಿನಲ್ಲಿ ಈ ಆರೋಪಿಗಳನ್ನು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದನು. ಇದು ಜಗಳಕ್ಕೆ ಕಾರಣವಾಗಿತ್ತು. ಈ ಜಗಳ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದÉ.
 

0/Post a Comment/Comments